ಶಾಣ್ಯಾ
= ಚಾಲೂ ಪದದ ಆಡುಭಾಷೆಯ ಸಮಾನಾರ್ಥಕ
= ಜಾರುವುದನ್ನು ತಡೆವ ಜೋರುತನ
= ಒಪ್ಪಿಸಿಕೊಳ್ಳುವುದು ಭೋಳೇತನ, ತಪ್ಪಿಸಿಕೊಳ್ಳುವುದು ಶಾಣ್ಯಾತನ
= ಉತ್ತರ ಕರ್ನಾಟಕದ ಉದ್ದಾಮ ಪಂಡಿತ
= ಸ್ವಲ್ಪ ಜಾಸ್ತಿಯಾದರೆ 'ಅಧಿಕ್ ಶಾಣ್ಯಾ' ಎನಿಸಿಕೊಳ್ಳುವವ
= ಬುದ್ಧಿಯನ್ನು ಬೇಡವಾದ ಕಡೆಗೂ ಬೇಕಾದಂತೆ ಉಪಯೋಗಿಸಿಕೊಳ್ಳಬಲ್ಲವ
= ಬುದ್ಧಿವಂತನಿಗೆ ಮೂರು ಕಡೆ. ಶಾಣ್ಯಾನಿಗೆ ಮೂರೂವರೆ ಕಡೆ.
= ಮಿತಿಗಿಂತ ಒಂದು ಇಂಚು ಹೆಚ್ಚು ಜಾಣತನವುಳ್ಳವ
= ಪೆದ್ದನ ಪೆದ್ದುತನವನ್ನು ಉಪಯೋಗಿಸಿ ತಾನು ಲಾಭ ಪಡೆಯಬಲ್ಲವ
= ವಾಣಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡವರೆಲ್ಲ ಶಾಣ್ಯಾಗಳೇ
= ಶಾಣ್ಯಾ ಎನಿಸಿಕೊಳ್ಳುವುದೂ ಶಾಣ್ಯಾತನದ ಸಂಕೇತವೇ. ಶಾಣ್ಯಾ ಇರಲೇಬೇಕೆಂದು ಅರ್ಥವಲ್ಲ
= ಪರೀಕ್ಷೆಯ ಮುಂಚಿನ ದಿನವೂ ಓದುವವ ದಡ್ಡ. ಆ ದಿನ ಕಾಪಿಚೀಟಿ ರೆಡಿಮಾಡಿಕೊಳ್ಳುವವ ಶಾಣ್ಯಾ
= ಶಾಣ್ಯಾತನವನ್ನು ಬಳಸಿಕೊಳ್ಳುವುದಕ್ಕೂ ಮತ್ತು ಬೆಳೆಸಿಕೊಳ್ಳುವುದಕ್ಕೂ ಶಾಣ್ಯಾನೇ ಆಗಿರಬೇಕು
= ಕಷ್ಟಪಟ್ಟು ದೇಹ ಬೆಳೆಸಿಕೊಳ್ಳುವವರು ಶ್ರಮಿಗಳು. ಅವರನ್ನು ಬೇಕೆಂದಾಗ ಬಳಸಿಕೊಳ್ಳುವವರು ಶಾಣ್ಯಾಗಳು
= ಪ್ರಜ್ಞಾವಂತರು ವೋಟ್ ಮಾಡುತ್ತಾರೆ. ಶಾಣ್ಯಾಗಳು ಸಾಮಾಜಿಕ ತಾಣಗಳಲ್ಲಿ ಬೊಂಬಡ ಹೊಡೆಯುತ್ತಾರೆ
ವಿಶ್ವನಾಥ ಸುಂಕಸಾಳ
vishwasunkasal@yahoo.com