ದೇಶ

ರಾಜಸ್ಥಾನದಲ್ಲಿ ಕಾಂಗ್ರೆಸ್‌ನ 'ಅಳಿಯ ಶಕ್ತಿ'

ರಾಜಸ್ಥಾನದಲ್ಲಿ ಕಾಂಗ್ರೆಸ್‌ನ 'ಅಳಿಯ ಶಕ್ತಿ'
Published On :

ಜಝ್ಝರ್/ಜಯಾಲ್/ಪಾಲಿ: ಒತ್ತಾಯಪೂರ್ವಕವಾಗಿ ರಾಜಸ್ಥಾನದ ರೈತರು ಅತ್ಯಂತ ಕಡಿಮೆ ಬೆಲೆಯಲ್ಲಿ ತಮ್ಮ ಜವೀನುಗಳನ್ನು ಮಾರಾಟ ಮಾಡುವಂತೆ ಮಾಡಲಾಯಿತು. ನಂತರ ಅಲ್ಲಿ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯ ಬದಲಾಗಿ 'ಅಳಿಯ ಶಕ್ತಿ'(ದಾಮಾದ್ ಪವರ್)ಯನ್ನು ನೀಡಿತು.  ಹೀಗೆಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾರನ್ನು ತೆಗಳಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ಭಾನುವಾರ ಸರಣಿ ರ್ಯಾಲಿಗಳನ್ನು ನಡೆಸಿದ ಮೋದಿ, ಗಾಂಧಿ ಕುಟುಂಬವನ್ನು ಟೀಕಿಸಲು ಮರೆಯಲಿಲ್ಲ.

ಅಳಿಯ ಶಕ್ತಿಯದ್ದೇ ಹೆಸರು: ಸೌರಶಕ್ತಿಯ ಹೆಸರಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ಶಹಜಾದಾ(ರಾಹುಲ್)ನ ಭಾವ(ವಾದ್ರಾ)ನಿಗೆ ನೀಡಲಾಯಿತು. ಶಹಜಾದಾ ಅವರೇ ಯಾವ ನೀತಿಯ ಆಧಾರದಲ್ಲಿ ನೀವು ನಿಮ್ಮ ಭಾವನಿಗೆ ಇಷ್ಟೊಂದು ಭೂಮಿ ನೀಡಿದಿರಿ ಎಂದು ಮೋದಿ ಪ್ರಶ್ನಿಸಿದ್ದಾರೆ. ದೇಶದಲ್ಲಿ ಅಣುಶಕ್ತಿ, ಜಲ ಶಕ್ತಿ, ಪವನ ಶಕ್ತಿ, ಸೌರಶಕ್ತಿಯ ಬಗ್ಗೆ ಕೇಳಿರುವಿರಿ. ಆದರೆ, ಮೊದಲ ಬಾರಿಗೆ ರಾಜಸ್ಥಾನದಲ್ಲಿ 'ಅಳಿಯ ಶಕ್ತಿ'ಯ ಹೆಸರು ಕೇಳಿಬರುತ್ತಿದೆ ಎನ್ನುವ ಮೂಲಕ ಸೋನಿಯಾ, ವಾದ್ರಾ, ರಾಹುಲ್ ವಿರುದ್ಧ ಮೋದಿ ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.