ಪತ್ರ ಬಹಿರಂಗಕ್ಕೆ ಮೋದಿ ಅನುಮತಿ ಕೇಳಿದ ಪಿಎಂಒ!

ನವದೆಹಲಿ: ಗೋಧ್ರೋತ್ತರ ಗಲಭೆಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ವಾಜಪೇಯಿ ಮತ್ತು ನರೇಂದ್ರ ಮೋದಿ ನಡುವಿನ ಪತ್ರಗಳು ಮತ್ತೆ ಸುದ್ದಿಯಲ್ಲಿವೆ. ಹಿಂದೊಮ್ಮೆ ಈ ಪತ್ರಗಳನ್ನು ಬಹಿರಂಗಪಡಿಸಬೇಕು ಎಂಬ ಬಗ್ಗೆ ಮಾಹಿತಿ ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ್ದಾಗ ಪ್ರಧಾನಮಂತ್ರಿಗಳ ಕಾರ್ಯಾಲಯ ಅದಕ್ಕೆ ಒಪ್ಪಿರಲಿಲ್ಲ. ಇದೀಗ ಚುನಾವಣೆ ವೇಳೆಯಲ್ಲಿಯೇ ಪ್ರಧಾನಿಮಂತ್ರಿಗಳ ಕಾರ್ಯಾಲಯವೇ ಆ ಪತ್ರಗಳನ್ನು ಬಿಡುಗಡೆ ಮಾಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಪ್ಪಿಗೆ ಪಡೆಯಲು ಮುಂದಾಗಿದೆ.
ತಿರಸ್ಕೃತವಾಯಿತು ಅರ್ಜಿ: ಗೋಧ್ರೋತ್ತರ ಗಲಭೆಗಳಿಗೆ ಸಂಬಂಧಿಸಿದಂತೆ ವಾಜಪೇಯಿ ಮತ್ತು ಮೋದಿ ನಡುವಿನ ಪತ್ರಗಳನ್ನು ಬಹಿರಂಗಗೊಳಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಧಾನಿ ಕಚೇರಿಯ ಮುಖ್ಯ ಮಾಹಿತಿ ಅಧಿಕಾರಿ ಎಸ್.ಇ.ರಿಜ್ವಿ ಈ ಅರ್ಜಿ ತಿರಸ್ಕರಿಸಿದ್ದರು. ಆದರೆ ಕಾರಣ ನೀಡದೆ ಮಾಹಿತಿ ನೀಡಲಾಗದು ಎಂದು ಅರ್ಜಿದಾರರಿಗೆ ತಿಳಿಸಿದ್ದರು.
ಮೇಲ್ಮನವಿ ಸಲ್ಲಿಕೆ: ಇದರಿಂದ ತೃಪ್ತಿಗೊಳ್ಳದ ಅರ್ಜಿದಾರರು ಪ್ರಧಾನಿ ಕಚೇರಿಯ ನಿರ್ದೇಶಕ ಕೃಷ್ಣ ಕುಮಾರ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮಾಹಿತಿ ನೀಡುವುದಿಲ್ಲ ಎಂದು ಹೇಳಿರುವ ಮುಖ್ಯ ಮಾಹಿತಿ ಅಧಿಕಾರಿಯ ವಾದ ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಅವರ ಪ್ರಕಾರ '11 ವರ್ಷದ ಹಿಂದೆ ಈ ಪತ್ರಗಳನ್ನು ಬರೆಯಲಾಗಿತ್ತು.
ಇದರಿಂದಾಗಿ ತನಿಖೆಗೆ ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅನಾನುಕೂಲವಾಗುವುದಿಲ್ಲ' ಎಂದು ವಾದಿಸಿದ್ದರು. ಈ ವಾದ ಆಲಿಸಿದ ನಿರ್ದೇಶಕ ಕೃಷ್ಣ ಕುಮಾರ್ ಗುಜರಾತ್ ಸರ್ಕಾರದ ಜತೆ ಚರ್ಚಿಸಿ 15 ದಿನಗಳ ಒಳಗಾಗಿ ಪತ್ರಗಳನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಅಧಿಕಾರಿಗೆ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


