ಮೋದಿ ಗಾಂಧಿ ಯಜ್ಞ

ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳ 121 ಕ್ಷೇತ್ರಗಳಿಗೆ ಲೋಕಸಭೆಯ ಐದನೇ ಸುತ್ತಿನ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಪ್ರಮುಖರ ಕುರಿತು ಬೆಳಕು ಚೆಲ್ಲುವ ಕಿರು ಮಾಹಿತಿಯೊಂದು ಇಲ್ಲಿದೆ...
ನರೇಂದ್ರ ಮೋದಿ
- ಹೊರಗಿನವರು. ಆದರೆ, ಒಳಗಿನವರಾಗಲು ಬಯಸುತ್ತಿದ್ದಾರೆ.
- ಬಾಲ್ಯದಲ್ಲಿ ಚಾಯ್ವಾಲಾ ಆಗಿದ್ದರು. ಈಗ ರಾಷ್ಟ್ರದ ಕಾವಲುಗಾರ ಆಗಲು ಬಯಸುತ್ತಿದ್ದಾರೆ.
- ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ, ಶ್ರೀರಾಮುಲು ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸುವ ವೇಳೆ ಹಿಂದೆ ಮುಂದೆ ನೋಡಿಲ್ಲ.
- ಪ್ರಾಣಿಗಳ ಹಕ್ಕುಗಳ ರಾಯಭಾರಿ. ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಜಾಗ ಮಾಡಿಕೊಡಲೆಂದೇ ಖಡ್ಗಮೃಗಗಳನ್ನು ಕೊಲ್ಲಲಾಗುತ್ತಿದೆ ಎಂದು ಖಚಿತವಾಗಿ ನಂಬಿರುವವರು. 'ಪಿಂಕ್ ಕ್ರಾಂತಿ'ಯ ಭಾಗವಾಗಿ ಹತ್ಯೆಯಾಗುತ್ತಿರುವ ಜಾನುವಾರುಗಳ ಕುರಿತು ಕಕ್ಕುಲಾತಿ ಹೊಂದಿರುವವರು. 'ನಾಯಿಮರಿ'ಗಳ ಮೇಲೆ ಹೊಂದಿರುವ ಪ್ರೀತಿ ಈಗಾಗಲೇ ಜಗಜ್ಜಾಹೀರಾಗಿದೆ.
- ಇತಿಹಾಸ, ಅಂಕಿ- ಸಂಖ್ಯೆಗಳ ವಿಚಾರಕ್ಕೆ ಬಂದಾಗ ಆಗಾಗ ಎಡವುತ್ತಾರೆ. ಇದೊಂದೇ ಅವರ ದೌರ್ಬಲ್ಯ.
- ಹೋದ ಕಡೆಯಲ್ಲೆಲ್ಲ ಗುಜರಾತ್ ಜತೆಗಿನ ಸಂಬಂಧವನ್ನು ಹುಡುಕುತ್ತಾರೆ.
- ಆರ್. ವರ್ಲ್ಡ್ (ರಿಲಯನ್ಸ್ ಕಂಪನಿ) ಕುರಿತು ತುಟಿಕ್ ಪಿಟಿಕ್ ಅನ್ನಲ್ಲ. ಒಬ್ಬ ಬಿಗ್ ಬಿ(ಅಮಿತಾಭ್ ಬಚ್ಚನ್) ಅವರನ್ನು ರಾಜ್ಯದ ಅಂಬಾಸಿಡರ್ ಆಗಿ ಮಾಡಿಕೊಂಡಿದ್ದಾರೆ, ಇನ್ನೊಬ್ಬ ಬಿಗ್ಬಿ( ದೊಡ್ಡ ಉದ್ಯಮಪತಿ)ಗೆ ರತ್ನಗಂಬಳಿ ಹಾಸಿ ರಾಜ್ಯದಲ್ಲಿ ರಾಜ ಮರ್ಯಾದೆ ನೀಡುತ್ತಿದ್ದಾರೆ.
- ತಮ್ಮ ಗಡ್ಡ ಪ್ರತಿ ದಿನ ಒಂದೇ ರೀತಿ ಕಾಣುವಂತೆ ನೋಡಿಕೊಳ್ಳುತ್ತಾರೆ.
- ಯಾರು ಏನೇ ಹೇಳಿದ್ರೂ ಚುನಾವಣಾ ಫಲಿತಾಂಶ ಈಗಾಗಲೇ ತಮಗೆ ಗೊತ್ತಿದೆ ಎನ್ನುತ್ತಾರೆ.
- ತಮಗೆ ಹಿಂದಿಲ್ಲ, ಮುಂದಿಲ್ಲ. ಹಾಗಾಗಿ ತಮ್ಮನ್ನು ತಾವು ದೇಶಕ್ಕೆ ಸಮರ್ಪಿಸಿಕೊಂಡಿರುವುದಾಗಿ ಹೇಳುತ್ತಾರೆ.
ನೀತಿ ನಿರೂಪಣೆ
ಆರ್ಥಿಕತೆ
ಜಾಗತೀಕರಣದಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ. ನಗರೀಕರಣಕ್ಕೆ ಆದ್ಯತೆ ನೀಡುತ್ತೇವೆ. 100 ಹೊಸ ನಗರಗಳು, ನ್ಯೂಯಾರ್ಕ್, ನ್ಯೂಜೆರ್ಸಿಯಂಥ ಟ್ವಿನ್ ಸಿಟಿಗಳನ್ನು ಅಭಿವೃದ್ಧಿಪಡಿಸುತ್ತೇವೆ. ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎನ್ನುತ್ತಾರೆ.
ಬೆಲೆ ಏರಿಕೆ
ಬಡವರಿಗಾಗಿ ಬೆಲೆ ನಿಯಂತ್ರಣ ನಿಧಿ ಸ್ಥಾಪನೆ.
ಎಫ್ಡಿಐ
ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಎಫ್ಡಿಐಗೆ ಬಿಜೆಪಿ ವಿರೋಧವಿದೆ. ಆದರೆ, ಮೋದಿ ತಮ್ಮ ಭಾಷಣದಲ್ಲಿ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಉದ್ಯೋಗ
ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ.
ವಿದೇಶಿ ನೀತಿ
ಹಳೆಯ ಶೈಲಿಯ ವಿದೇಶಿ ನೀತಿಗಿಂತ ಆರ್ಥಿಕ ಒಪ್ಪಂದಗಳಿಗೆ ಹೆಚ್ಚಿನ ಆದ್ಯತೆ. ಆದರೆ, ಈ ರೀತಿಯ ಒಪ್ಪಂದಗಳಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಮೋದಿ ಅಧಿಕಾರಕ್ಕೆ ಬಂದ್ರೂ ಬಾರದಿದ್ದರೂ ಅದು ಮುಂದುವರಿಯಲಿದೆ ಎನ್ನುತ್ತಾರೆ ತಜ್ಞರು.
ಭ್ರಷ್ಟಾಚಾರ
ಕಾಳದಂಧೆಯಲ್ಲಿ ಪಾಲ್ಗೊಳ್ಳುವವರನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ. ವಿದೇಶಿ ಬ್ಯಾಂಕ್ಗಳಿಂದ ಕಪ್ಪು ಹಣ ವಾಪಸ್ ತರಲು ಟಾಸ್ಕ್ಫೋರ್ಸ್ ರಚನೆ.
ಭಯೋತ್ಪಾದನೆ
ಭಯೋತ್ಪಾದನೆ ಹೆಚ್ಚಲು ಯುಪಿಎ ಕಾರಣ ಎಂದು ನಂಬಿದ್ದಾರೆ. ಆದರೆ, ಇದರ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಕುರಿತು ಮಾಹಿತಿ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ತಗ್ಗಿದೆ ಎಂಬುದೂ ಒಪ್ಪಿಲ್ಲ.
ರಾಹುಲ್ ಗಾಂಧಿ
- ಒಳಗಿನವರು ಆದರೆ, ಬಹುತೇಕರ ಪಾಲಿಗೆ ಈಗಲೂ ಹೊರಗಿನವರಾಗಿಯೇ ಉಳಿದವರು.
- ಆತ್ಮಪ್ರಶಂಸೆ ದೇಶಕ್ಕೆ ಅಪಾಯಕಾರಿ ಎಂದು ನಂಬಿರುವವರು.
- ಪ್ರಧಾನಿ ಹುದ್ದೆಯನ್ನು ಗಂಭೀರವಾಗಿ ಪರಿಗಣಿಸಿದವರು.
- ಇತಿಹಾಸ, ಭೂಗೋಳ, ರಾಜಕೀಯ ವ್ಯವಹಾರಗಳ ಕುರಿತು ಸಾಕಷ್ಟು ಓದುತ್ತಾರೆ. ಆದರೆ, ಸಾರ್ವಜನಿಕರ ವಿಚಾರಗಳ ಕುರಿತು ಓದಿದ್ದು ಕಡಿಮೆ.
- ಭಾರತದ ಕುರಿತ ತಮ್ಮ ಕಲ್ಪನೆ ಕುರಿತು ಆಳವಾಗಿ ಯೋಚಿಸುತ್ತಾರೆ. ಹೀಗಾಗಿ ಅದರ ಕುರಿತು ಮಾತು ಆರಂಭಿಸಿದರೆ ನಿಲ್ಲಿಸುವುದೇ ಇಲ್ಲ.
- ಅಗತ್ಯಬಿದ್ದರೆ ದಪ್ಪಚರ್ಮದವನಾಗುವುದಾಗಿಯೂ ಹೇಳುತ್ತಾರೆ.
- ನೀವು ಇವರನ್ನು 'ಯುವರಾಜ' ಎಂದು ಕರೆಯುವಂತಿಲ್ಲ.
- ಆರ್ ವರ್ಲ್ಡ್(ರಿಲಯನ್ಸ್) ಕುರಿತು ಬಾಯಿ ಬಿಚ್ಚೋಲ್ಲ. ಈ ಕುರಿತು ಪ್ರತಿಕ್ರಿಯೆ ನೀಡುವ ಜವಾಬ್ದಾರಿಯನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ಬಿಟ್ಟಿದ್ದಾರೆ. ಮತ್ತೊಂದು 'ಆರ್' ಅಂದರೆ ರಾಬರ್ಟ್ ವಾದ್ರಾ ಕುರಿತ ಚರ್ಚೆಯಿಂದಲೂ ಇವರು ದೂರ ಉಳಿಯುತ್ತಾರೆ.
- ಭೌತಶಾಸ್ತ್ರದ ಜ್ಞಾನ ಹೊಂದಿದ್ದಾರೆ. ಈ ಜ್ಞಾನ ಮತದಾರರ ಮುಂದೆ ಎಷ್ಟು ಹೇಳಬೇಕೋ ಅದಕ್ಕಿಂತ ಸ್ಪಲ್ಪ ಜಾಸ್ತಿನೇ ಇದೆಯೇನೋ?
- ಗಡ್ಡಬಿಡಬೇಕೇ? ಕ್ಲೀನ್ ಶೇವ್ ಮಾಡಿಕೊಳ್ಳಬೇಕೇ ಎನ್ನುವ ಕುರಿತು ಸ್ಪಷ್ಟ ನಿರ್ಧಾರ ಇದ್ದಂತಿಲ್ಲ.
- ವೈಯಕ್ತಿಕ ದಾಳಿಯಿಂದ ದೂರವೇ ಉಳಿಯುತ್ತಾರೆ.
- ಇವರ ತಲೆಗೆ ತಾಯಿ ಮತ್ತು ಸಹೋದರಿ ಹೆಗಲು ಕೊಡುತ್ತಾರೆ. ಇನ್ನೂ ಸೂಕ್ತ ಹುಡುಗಿಗಾಗಿ ಹುಡುಕಾಡುತ್ತಿದ್ದಾರೆ.
ಆರ್ಥಿಕತೆ
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಆದ್ಯತೆ.
ಬೆಲೆ ಏರಿಕೆ
ಯಾಕೆ, ಹೇಗೆ ಮತ್ತು ಯಾರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವುದರ ಅರಿವಿದೆ. ಆದರೆ, ಇದಕ್ಕೆ ಕಡಿವಾಣ ಹಾಕುವ ವಿಚಾರದ ಕುರಿತು ಇವರ ಚಿಂತನೆ ಹಳೆಯ ಬಾಟಲಿಯಲ್ಲಿ ಹೊಸ ವೈನ್ ನೀಡುವಂತಿದೆ.
ಎಫ್ಡಿಐ
ಎಫ್ಡಿಐ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ರೈತರಿಗೆ ಅನುಕೂಲವಾಗುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಬಡವರು ಅಭಿವೃದ್ಧಿಯಾಗಬೇಕಾದರೆ ಎಫ್ಡಿಐ ಅಗತ್ಯ ಎನ್ನುತ್ತಾರೆ.
ಉದ್ಯೋಗ
ಮುಂದಿನ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವ ಭರವಸೆ.
ವಿದೇಶಿ ನೀತಿ
ಈ ಕುರಿತ ನಿಲುವು ಭಗವಂತನಿಗೇ ಗೊತ್ತು.
ಭ್ರಷ್ಟಾಚಾರ
ಭಾರತದ ಪಾಲಿಗೆ ಸವಾಲು ಎಂದಿದ್ದಾರೆ. ಆದರೆ, ಭ್ರಷ್ಟಾಚಾರ ನಿರ್ಮೂಲನೆಗೆ ಇತರೆ ಸರ್ಕಾರಗಳಿಗಿಂತ ಯುಪಿಎ ಹೆಚ್ಚಿನ ಕೆಲಸ ಮಾಡಿದೆ ಎನ್ನುತ್ತಾರೆ!
ಭಯೋತ್ಪಾದನೆ
ಬಿಜೆಪಿಯಂಥ ಪಕ್ಷಗಳು ಸೃಷ್ಟಿಸುವ ಕೋಮುಗಲಭೆಯಿಂದಾಗಿ ಹುಟ್ಟಿಕೊಂಡ ಆಕ್ರೋಶ ಭಯೋತ್ಪಾದನೆಗೆ ಕಾರಣ ಎಂದು ನಂಬಿದ್ದಾರೆ.
ಸಲಿಂಗಕಾಮ
ಸ್ಪಷ್ಟ ಅಭಿಪ್ರಾಯ ಹೊಂದಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಈ ದೇಶ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದೆ ಎನ್ನುತ್ತಾರೆ ರಾಹುಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


