ಲೋಕಾಯುಕ್ತ ರಚನೆಯಾದ್ರೆ ಮೋದಿ ಜೈಲುಪಾಲು: ರಾಹುಲ್

ಬರ್ನಾಲಾ/ಅಮ್ರೇಲಿ/ಲಖನೌ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದಾರೆ. ಗುಜರಾತ್ನ ಅಮ್ರೇಲಿಯಲ್ಲಿ ಮಾತನಾಡಿದ ರಾಹುಲ್, 'ಗುಜರಾತ್ನಲ್ಲಿ ಲೋಕಾಯುಕ್ತ ರಚನೆಯಾದರೆ ಮೊದಲು ಮೋದಿ ಅವರು ಜೈಲು ಸೇರುತ್ತಾರೆ' ಎಂದರೆ, 'ಮೋದಿ ಮಾದರಿಯಿಂದ ದೇಶವನ್ನು ದೇವರೇ ರಕ್ಷಿಸಬೇಕು' ಎಂದು ಪಂಜಾಬ್ನ ಮಾಲ್ವಾ ಹಾಗೂ ಉ.ಪ್ರದೇಶದ ರಾಯ್ಬರೇಲಿ ರ್ಯಾಲಿಯಲ್ಲಿ ಸೋನಿಯಾ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ವಾದ್ರಾ ಹಾಗೂ ಪ್ರಿಯಾಂಕಾ ವಿರುದ್ಧ ಚಾಟಿ ಬೀಸಿದ್ದಾರೆ.
'ಮೋದಿ ಮಾದರಿ'ಯಿಂದ ದೇಶವನ್ನು ದೇವರೇ ಕಾಪಾಡಬೇಕು: ಸೋನಿಯಾ
* ಗುಜರಾತ್ನ 'ಮೋದಿ ಮಾದರಿ'ಯಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ದೇವರೇ ನಮ್ಮ ದೇಶವನ್ನು ಕಾಪಾಡಬೇಕು
* ಈ ಮಾದರಿಯಡಿ ನಡೆಯುತ್ತಿರುವುದೇನು? ಕಳೆದ 50 ವರ್ಷಗಳಿಂದ ಅಲ್ಲಿ ನೆಲೆಸಿದ್ದ ಸಿಖ್ಖರನ್ನು ಅಲ್ಲಿಂದ ಓಡಿಸಲಾಗುತ್ತಿದೆ.
* ಬಿಜೆಪಿ 'ಅಧಿಕಾರದಾಹಿ' ಪಕ್ಷ. ಸುಳ್ಳು ಹೇಳುವುದು ಮತ್ತು ಮಾರುವುದೇ ಅದರ ಕೆಲಸ. ಇದು ಅವರ ರಕ್ತದಲ್ಲೇ ಸೇರಿದೆ.
* ಸುಳ್ಳಿನಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ದೂರದೃಷ್ಟಿತ್ವ, ಪ್ರೀತಿ, ಬದ್ಧತೆ, ವಿಶಾಲ ಹೃದಯ ಅಗತ್ಯ. ಅದು ಕಾಂಗ್ರೆಸ್ನಲ್ಲಿದೆ.
ಚೌಕಿದಾರನಾದರೆ ಗತಿ ಏನು?: ರಾಹುಲ್
* ಗುಜರಾತ್ನಲ್ಲಿ ಲೋಕಾಯುಕ್ತ ರಚನೆಯಾದರೆ ಮೊದಲು ಮೋದಿಯವರೇ ಜೈಲು ಸೇರುತ್ತಾರೆ.
* ನಾನು ದೇಶದ ಚೌಕಿದಾರ(ರಕ್ಷಕ)ನಾಗುತ್ತೇನೆ ಎಂದು ಮೋದಿ ಹೇಳುತ್ತಾರೆ. ರಾಜ್ಯದಲ್ಲೇ ಉದ್ಯಮಿಗಳಿಗೆ ಚಿಕ್ಕಾಸಿಗೆ ಭೂಮಿ ಕೊಟ್ಟ ಮೋದಿ ದೇಶದ 'ಚೌಕಿದಾರ್' ಆದರೆ ಏನು ಗತಿ?
* ಗುಜರಾತ್ನಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಬೇಕಾದ 27 ಸಾವಿರ ಹುದ್ದೆಗಳು ಭರ್ತಿಯಾಗಿಲ್ಲ. ಮೋದಿ ಆಡಳಿತದಲ್ಲಿ ಜನರು ನಿಜಕ್ಕೂ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆಯೇ?
ವಾದ್ರಾ ವಿರುದ್ಧ ತನಿಖೆಗೆ ಒತ್ತಾಯಿಸುವೆ: ಯಶವಂತ್
* ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ, ವಾದ್ರಾ ವಿರುದ್ಧ ತನಿಖೆಗೆ ನಾನೇ ಒತ್ತಾಯಿಸುತ್ತೇನೆ
* ವಾದ್ರಾರಿಗೆ ಎನ್ಎಸ್ಜಿ ಭದ್ರತೆ ಒದಗಿಸಲಾಗಿದೆ. ಇಡೀ ಗಾಂಧಿ ಕುಟುಂಬಕ್ಕೆ ಈ ಭದ್ರತೆ ಇದೆ. ಒಂದು ವೇಳೆ ವಾದ್ರಾ ಖಾಸಗಿ ವ್ಯಕ್ತಿಯಾದರೆ ಅವರಿಗೆ ನೀಡಿರುವ ಭದ್ರತೆ ವಾಪಸ್ ಪಡೆಯಲಿ
* ಪ್ರಿಯಾಂಕಾ ಅವರು 'ವಾದ್ರಾ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್' ಕಾಲೇಜೊಂದನ್ನು ತೆರೆಯಲಿ. 1 ಲಕ್ಷ ಬಂಡವಾಳದಿಂದ ಮೂರೇ ವರ್ಷಗಳಲ್ಲಿ 300 ಕೋಟಿ ಆದಾಯ ಗಳಿಸುವುದು ಹೇಗೆ ಎಂಬುದನ್ನು ಕಲಿಸಿಕೊಡಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


