ದೇಶ

ನನ್ನನ್ನು ಅವಮಾನಿಸಿ, ಕೆಳಜಾತಿಗಳನ್ನಲ್ಲ

ನನ್ನನ್ನು ಅವಮಾನಿಸಿ, ಕೆಳಜಾತಿಗಳನ್ನಲ್ಲ
Published On :

ದೊಮರಿಯಾಗಂಜ್: ಪ್ರಿಯಾಂಕಾ ಗಾಂಧಿಯವರ 'ನೀಚ ರಾಜನೀತಿ' ಟೀಕೆಗೆ ಉತ್ತರಿಸಲು 'ಜಾತಿ ಕಾರ್ಡ್‌' ಬಳಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, 'ಕೆಳಜಾತಿಯಲ್ಲಿ ಜನಿಸಿರುವ ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಿ. ಆದರೆ ಹಿಂದುಳಿದ ಸಮುದಾಯಗಳನ್ನು ಅವಮಾನಿಸಬೇಡಿ' ಎಂದು ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ದೊಮರಿಯಾಗಂಜ್‌ನಲ್ಲಿ ಮಂಗಳವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, 'ನಾನು ಕೆಳಜಾತಿಯಲ್ಲಿ ಜನಿಸಿರುವುದೇ ಅಪರಾಧವಾ? ಹಿಂದುಳಿದ ಜಾತಿಯಲ್ಲಿ ಜನಿಸಿದವನಾಗಿ ನಾನು ಯಾರನ್ನಾದರೂ ಅಪಮಾನಿಸಲು ಸಾಧ್ಯವೆ? ಇಂಥ ಹೊಲಸು ಆರೋಪವನ್ನು ನನ್ನ ಮೇಲೆ ಹೊರಿಸಲಾಗಿದೆ' ಎಂದು ದೂರಿದರು. ಸೋಮವಾರದ ಅಮೇಠಿ ರ್ಯಾಲಿಯಲ್ಲಿ ತಮ್ಮ ತಂದೆಯನ್ನು ಮೋದಿ ಅವಮಾನಿಸಿದ್ದಾರೆ. ಅವರು ನೀಜ ರಾಜನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು.  
'ನಾನು ಭಾರಿ ಅಪರಾಧ ಮಾಡಿದ್ದೇನೆ ಎಂಬಂತೆ ನನ್ನನ್ನು ಟೀ ಮಾರುವವ ಎಂದು ಟೀಕಿಸಲಾಗುತ್ತಿದೆ. ಚಹಾ ಮಾರುವವ ದೇಶ ಆಳಬಲ್ಲನೆ ಎಂಬ ಪ್ರಶ್ನೆಯನ್ನೂ ಎತ್ತಲಾಗಿದೆ. ನಾನು ಚಹಾ ಮಾರಿದ್ದೇನೆಯೇ ವಿನಾ ದೇಶವನ್ನು ಮಾರಾಟ ಮಾಡಿಲ್ಲ' ಎಂದು ಕಾಂಗ್ರೆಸ್ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು.
ತಮ್ಮ ವಿರುದ್ಧ ನಡೆಯುತ್ತಿರುವ ಇಂಥ ವೈಯಕ್ತಿಕ ನಿಂದನೆಗಳನ್ನು ತಡೆಯಲು ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ ಮೋದಿ, 'ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆಯೊ ಇಲ್ಲವೊ ಗೊತ್ತಿಲ್ಲ. ಏಕೆಂದರೆ ಅವರಿಗೂ ಅವರದ್ದೇ ಆದ ಮಿತಿಗಳಿವೆ' ಎಂದು ಸೂಚ್ಯವಾಗಿ ಆಯೋಗ ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಸೂಚ್ಯವಾಗಿ ನುಡಿದರು.
ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ಕ್ಷಮೆ ಯಾಚಿಸಬೇಕು. ಅವರ ಮಾತುಗಳು ಶ್ರೀಮಂತರ ಮನೋಭಾವ ಮತ್ತು ಬಡವರ ಕುರಿತು ಇರುವ ಪಕ್ಷಪಾತ ಧೋರಣೆಯನ್ನು ತೋರಿಸುತ್ತವೆ.
- ರವಿಶಂಕರ ಪ್ರಸಾದ್, ಬಿಜೆಪಿ ಮುಖಂಡ
ಪ್ರಿಯಾಂಕಾ ಹೇಳಿಕೆಗೆ ನರೇಂದ್ರ ಮೋದಿ ಉದ್ದೇಶಪೂರ್ವಕವಾಗಿ ಅಪಾರ್ಥ ಕಲ್ಪಿಸುತ್ತಿದ್ದಾರೆ. ದಟ್ ಈಸ್ ಮೋದಿ. ಅವರೊಬ್ಬ ಸ್ಪಿನ್ ಮಾಸ್ಟರ್.
- ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.