ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸೆರ್ಗೆಯ್ ಇಗ್ನಶೆವಿಚ್, ವಿಶ್ವಕಪ್ ಟೂರ್ನಿ ಇಲ್ಲದೇ ಹೋಗಿದ್ದರೆ ಮೊದಲೇ ನಿವೃತ್ತಿ ಘೋಷಿಸುತ್ತಿದ್ದೆ. ಆದರೆ ವಿಶ್ವಕಪ್ ನಂತಹ ಪ್ರಮುಖ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಇದೀಗ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.