30 ವರ್ಷದ ಲಿಯೊನೆಲ್ ಮೆಸ್ಸಿ ಮುಂದಿನ ವಿಶ್ವಕಪ್ ಟೂರ್ನಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ತಾವು ಪ್ರತಿನಿಧಿಸುತ್ತಿರುವ ದೇಶಕ್ಕಾಗಿ ತಮ್ಮ ಕಡೆಯಿಂದ ಒಂದು ವಿಶ್ವಕಪ್ ಗೆದ್ಜುಕೊಡುವ ಹಂಬಲ ಲಿಯೊನೆಲ್ ಮೆಸ್ಸಿಯದ್ದು, ಹೀಗಾಗಿ ರಷ್ಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶತಾಯಗತಾಯ ತಂಡವನ್ನು ಜಯದ ಹಾದಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಮೆಸ್ಸಿ ಮೇಲಿದೆ. ದೇಶೀಯ ಟೂರ್ನಿಗಳಲ್ಲಿ ಬಾರ್ಸಿಲೋನಾ ಫುಟ್ ಬಾಲ್ ಕ್ಲಬ್ ತಂಡದ ಪರ ಆಡಿರುವ ಮೆಸ್ಸಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆಯಾದರೂ ಇದೇ ಯಶಸ್ಸು ರಾಷ್ಟ್ರೀಯ ತಂಡದಿಂದ ಬಂದಿಲ್ಲ.