ನೀರ್ ದೋಸೆ

ನೀರ್ ದೋಸೆ ಮಾಡುವ ವಿಧಾನ...
ನೀರ್ ದೋಸೆ
ನೀರ್ ದೋಸೆ

ಬೇಕಾಗುವ ಪದಾರ್ಥಗಳು

  • ಅಕ್ಕಿ 2 ಕಪ್
  • ತೆಂಗಿನಕಾಯಿ ತುರಿ- 1ಕಪ್
  • ಉಪ್ಪು
ಮಾಡುವ ವಿಧಾನ
  • ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನಸಬೇಕು.
  • ನಂತರ ನೀರು ಬಸಿದು ಅಕ್ಕಿ ಮತ್ತು ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿಗೆ ನೀರು ಬೆರಿಸಿ ತೆಳುವಾಗಿ ಕಲೆಸಿಕೊಳ್ಳಿ
  • ನಂತರ ಸ್ಟವ್ ಹಚ್ಚಿ ಕಬ್ಬಿಣದ ಹೆಂಚು ಇಟ್ಟು ಚೆನ್ನಾಗಿ ಕಾಯಿಸಿ. ಅದಕ್ಕೆ ಎಣ್ಣೆ ಹಚ್ಚಿ ಸಿದ್ದವಾಗಿಟ್ಟುಕೊಂಡ ನೀರ್ ದೋಸೆ ಹಿಟ್ಟನ್ನು ನಿಮಗೆ ಬೇಕಾದ ಆಕಾರದಲ್ಲಿ ಹಾಕಿ. ನೀರ್ ದೋಸೆಯನ್ನು ಎರಡು ಕಡೆ ಬೇಯಿಸಬಾರದು.
  • ನಂತರ ತೆಂಗಿನ ಕಾಯಿ ಚಟ್ನಿ ಜೊತೆ ಬಿಸಿಯಾಗಿರುವಾಗಲೇ ನೀರ್ ದೋಸೆ ಸವಿಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com