ಮೀನಿನ ವಡೆ

ಮೀನಿನ ವಡೆ ಮಾಡುವ ವಿಧಾನ...
ಮೀನಿನ ವಡೆ
ಮೀನಿನ ವಡೆ

ಬೇಕಾಗುವ ಪದಾರ್ಥಗಳು...

  • ದೊಡ್ಡ ಗಾತ್ರದ - ಮೀನು (ಅರ್ಧ ಕೆಜಿ)
  • ಖಾರದ ಪುಡಿ - 1 ಚಮಚ
  • ಕಡಲೆ ಹಿಟ್ಟು - 100 ಗ್ರಾಂ
  • ಅರಿಶಿನ ಪುಡಿ - ಅರ್ಧ ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
  • ಗರಂ ಮಸಾಲ - 1 ಚಮಚ
  • ಜೀರಿಗೆ ಪುಡಿ - ಅರ್ಧ ಚಮಚ
  • ನಿಂಬೆ ಹಣ್ಣು - 1
  • ಸೋಂಪು -  1 ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ತಂದೂರಿ ಮಸಾಲ - ಅರ್ಧ ಚಮಚ
ಗರಂ ಮಸಾಲಗೆ ಬೇಕಾಗುವ ಪದಾರ್ಥಗಳು
  • ಲವಂಗ - 3
  • ಏಲಕ್ಕಿ - 2
  • ನಕ್ಷತ್ರ ಮೊಗ್ಗು - 2
  • ಚಕ್ಕೆ - 1
ಮಾಡುವ ವಿಧಾನ...
  • ಮೀನನ್ನು ಶುದ್ಧ ಮಾಡಿ ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಅರ್ಧಗಂಟೆಗಳ ಕಾಲ ಮಿಶ್ರಣ ಮಾಡಬೇಕು.
  • ಗರಂ ಮಸಾಲೆಗಾಗಿ ಲವಂಗ ಏಲಕ್ಕಿ, ನಕ್ಷತ್ರ ಮೊಗ್ಗು, ಚಕ್ಕೆ ಎಲ್ಲವನ್ನೂ ಕೆಂಪಗೆ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು.
  • ನಂತರ ಕಡಲೆ ಹಿಟ್ಟು, ಗರಂ ಮಸಾಲ ಪುಡಿ, ಜೀರಿಗೆ ಪುಡಿ, ಸ್ವಲ್ಪ ಸೋಂಪು, ಉಪ್ಪು, ತಂದೂರಿ ಮಸಾಲೆ ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಅದು ಕಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿದ ಮಸಾಲೆಯಲ್ಲಿ ಮೀನನ್ನು ಅದ್ದಿ ಡೀಪ್ ಫ್ರೈ ಮಾಡಿದರೆ ಮೀನಿನ ವಡೆ ತಯಾರಾಗುತ್ತದೆ. ಇದಕ್ಕೆ ನಿಂಬೆಹಣ್ಣಿನ ರಸ ಹಾಕಿ ತಿನ್ನಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com