ತಂದೂರಿ ಚಿಕನ್

ತಂದೂರಿ ಚಿಕನ್ ಮಾಡುವ ವಿಧಾನ...
ತಂದೂರಿ ಚಿಕನ್
ತಂದೂರಿ ಚಿಕನ್

ಬೇಕಾಗುವ ಪದಾರ್ಥಗಳು

  • ನಾಟಿ ಕೋಳಿಯ ಮಾಂಸ - 1 ಕೆಜಿ
  • ಎಣ್ಣೆ - 100 ಗ್ರಾಂ
  • ಗಟ್ಟಿ ಮೊಸರು - 1 ಬಟ್ಟಲು
  • ನಿಂಬೆಹಣ್ಣು - 1
  • 10-12 ಕಾಶ್ಮೀರಿ ಮೆಣಸಿನಕಾಯಿ
  • ಶುಂಠಿ- 2 ಸ್ವಲ್ಪ
  • ಜೀರಿಗೆ - ಅರ್ಧ ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
  • ಕೋಳಿಯ ಹೊಟ್ಟೆಯ ಸಾಮಾನುಗಳನ್ನು ತೆಗೆದು, ಇಡೀ ಕೋಳಿಯ ಚರ್ಮ ತೆಗೆದುಬಿಡಿ.
  • ಶುದ್ಧವಾದ ಬಟ್ಟೆಯಲ್ಲಿ ಕೋಳಿಯ ಒಳಗೆ ಹೊರಗೆ ಒರೆಸಿ ತೇವ ತೆಗೆಯಬೇಕು.
  • ಎದೆಯ ಭಾಗ ತೊಡೆಗಳ ಮೇಲೆ ಆಳವಾಗಿ ಗೀರಿ. ಮೊಸರನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ನೀರನ್ನು ತೆಗೆದು ಕೆನೆಯನ್ನ ಉಳಿಸಿಕೊಳ್ಳಿ.
  • ಅದರೊಂದಿಗೆ ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಟ್ಟಿ ಮೊಸರಿನಲ್ಲಿ ನುಣ್ಣಗೆ ರುಬ್ಬಿ, ಬಣ್ಣ ಸಾಲದಿದ್ದರೆ ಮಸಾಲೆಗೆ 2 ತೊಟ್ಟು ತಂದುರಿ ಬಣ್ಣ ಸೇರಿಸಿ.
  • ಒರೆಸಿಟ್ಟ ಕೋಳಿಯ ಒಳ ಹೊರ ಭಾಗಗಳಿಗೆ ಹಚ್ಚಿ ಒಂದೆರಡು ಗಂಟೆ ನೆನೆಸಿ.
  • ನಂತರ ತಂದೂರಿಯನ್ನು ಒಲೆಯಲ್ಲಿ ಆಗಾಗ ಎಣ್ಣೆ ಸವರುತ್ತಾ ಬೇಯಿಸಿ. ಬಡಿಸುವ ಮೊದಲು ಕೋಳಿಗೆ ನಿಂಬೆರಸ ಸವರಿ. ನಾಟಿ ಕೋಳಿಯಾದ್ದರಿಂದ ರುಬ್ಬುವ ಮಸಾಲೆಗೆ 1 ಸಣ್ಣ ತುಂಟು ಪರಂಗಿಕಾಯಿ ತುರಿ ಸೇರಿಸಿ. ಇದು ಕೋಳಿಯನ್ನು ಮೃದವಾಗಿ ಮಾಡುತ್ತದೆ.
-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com