ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಚಿಕನ್ ಪೀಸ್ ಗಳನ್ನಿಟ್ಟು ಉಪ್ಪು ಹಾಗೂ ಕಾಳು ಮೆಣಸಿನ ಪುಡಿಯನ್ನು ಎರಡೂ ಬದಿಗೂ ಹಾಕಬೇಕು. ಚಿಕನ್ ಪೀಸ್ ಗಳಿಗೆ ಮೈದಾ ಹಿಟ್ಟನ್ನು ಹಾಕಬೇಕು. ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು 2 ಚಮಚ ಬೆಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕಾಯಲು ಬಿಡಬೇಕು. ನಂತರ ಮೈದಾಹಿಟ್ಟು ಹಾಕಿ ಚಿಕನ್ ಪೀಸ್ ಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಎರಡು ಬದಿಯಲ್ಲಿಯೂ ಬೇಯಿಸಿಕೊಳ್ಳಬೇಕು.
ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು ಮತ್ತು ಉಪ್ಪು ಹಾಕಬೇಕು. ನಂತರ ಪಾಸ್ತಾವನ್ನು ಇದಕ್ಕೆ ಹಾಕಿ ಕೆಲಸ ನಿಮಿಷಗಳ ನಂತರ ನೀರನ್ನು ತೆಗೆದು ಪಾಸ್ತಾವನ್ನು ತೆಗೆಯಬೇಕು. ಪಾಸ್ತಾದಲ್ಲಿರುವ ನೀರು ಸೋರಿಹೋಗಲು ಬಿಡಬೇಕು.
ಬಾಣಲೆಯನ್ನು ಒಲೆಯ ಮೇಲಿಟ್ಟು 2 ಚಮಚ ಎಣ್ಣೆ ಹಾಕಿ ಕಾಯಲು ಬಿಡಬೇಕು. ಮಧ್ಯಮ ಉರಿಯಲ್ಲಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಬೇಕು. ನಂತರ ಇದಕ್ಕೆ ವೈಟ್ ವೈನ್ ಹಾಕಬೇಕು. ವೈನ್ ಅರ್ಧದಷ್ಟು ಆಗುವವರೆಗೂ ಕಾಯಿಸಬೇಕು. ನಂತರ ಇದಕ್ಕೆ ನಿಂಬೆ ರಸವನ್ನು ಹಾಕಬೇಕು.
ಇದಕ್ಕೆ ಓರೆಗಾನೊ, ರೆಡ್ ಚಿಲ್ಲಿ ಫ್ಲೇಕ್ಸ್, ಉಪ್ಪು, ಕಾಳು ಮೆಣಸಿನ ಪುಡಿ, ಉಳಿದ ಬೆಣ್ಣೆ, ಸಣ್ಣಗೆ ಹೆಚ್ಚಿದ ಕೊತ್ತಂಬಸಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಪಾಸ್ತಾ ಹಾಗೂ ಚಿಕನ್ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಬೇಕು. ಒಂದು ವೇಳೆ ಡ್ರೈ ಆಗಿದೆ ಎನಿಸಿದರೆ ಪಾಸ್ತಾ ಬೇಯಿಸಿದ ನೀರನ್ನು ಸ್ವಲ್ಪ ಹಾಕಿಕೊಳ್ಳಬಹುದು.
ಸರ್ವಿಂಗ್ ಪ್ಲೇಟ್ ತೆಗೆದುಕೊಂಡು ಲೆಮೆನ್ ಚಿಕನ್ ಪಾಸ್ತಾವನ್ನು ಅದಕ್ಕೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಲೆಮೆನ್ ಚಿಕನ್ ಪಾಸ್ತಾ ಸವಿಯಲು ಸಿದ್ಧವಾಗುತ್ತದೆ.