ಮೊದಲು ಅಕ್ಕಿ, ಉದ್ದಿನ ಬೇಳೆ ಹಾಗೂ ಅವಲಕ್ಕಿಯನ್ನು ಹಿಂದಿನ ದಿನ ಬೆಳಿಗ್ಗೆ ಚೆನ್ನಾಗಿ ತೊಳೆದು ಪ್ರತ್ಯೇಕ ಪಾತ್ರೆಯಲ್ಲಿ ನೆನೆ ಹಾಕಬೇಕು. ಸಂಜೆ ವೇಳೆ ನೀರನ್ನು ಬಸಿದು ಪ್ರತ್ಯೇಕವಾಗಿ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಿ ಪಾತ್ರೆ ಮೇಲೆ ಒಂದು ಮುಚ್ಚಳ ಮುಚ್ಚಿಡಬೇಕು. ರಾತ್ರಿ ಪೂರ್ತಿ ಹಿಟ್ಟು ನೆನೆಯಲು ಬಿಡಬೇಕು.
ನಂತರ ಈರುಳ್ಳಿ, ಉಳಿದ ತರಕಾರಿ, ಶುಂಠಿ, ಪುದೀನ, ಹಸಿಮೆಣಸಿನ ಕಾಯಿ ಎಲ್ಲವನ್ನೂ ಸಣ್ಣಗೆ ಹೆಚ್ಚಿಕೊಳ್ಳಬೇಕು.
ರುಬ್ಬಿ, ರಾತ್ರಿಯಿಡೀ ನೆನೆಸಿಕೊಂಡ ಹಿಟ್ಟಿಗೆ ಸ್ವಲ್ಪ ಸೋಡಾ ಹಾಗೂ ಸಣ್ಣಗೆ ಹೆಚ್ಚಿದ ತರಕಾರಿ, ಉಳಿದ ಪದಾರ್ಥಗಳನ್ನು ಹಾಕಬೇಕು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು
ಒಗ್ಗರಣೆ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಒಗ್ಗರಣೆ ತಣ್ಣಗಾದ ನಂತರ ಇದನ್ನು ಇಡ್ಲಿ ಹಿಟ್ಟಿಗೆ ಹಾಕಬೇಕು.
ಪನಿಯಾರ ಮಾಡುವ ಇಡ್ಲಿ ಪ್ಲೇಟ್ ನ್ನು ಒಲೆಯ ಮೇಲಿಡಬೇಕು. ಬಿಸಿಯಾದ ನಂತರ ಸ್ವಲ್ಪ ಪ್ರತೀಯೊಂದು ಅಚ್ಚುಗಳಿಗೆ ಎಣ್ಣೆ ಹಾಕಿ ಅದಕ್ಕೆ ಈಗಾಗಲೇ ತಯಾರು ಮಾಡಿಕೊಂಡ ಹಿಟ್ಟನ್ನು ಹಾಕಬೇಕು. ಸಣ್ಣೆ ಉರಿಯಲ್ಲಿ ಎರಡೂ ಬದಿಯಲ್ಲೂ ಬೇಯಿಸಿದರೆ ರುಚಿಕರವಾದ ತರಕಾರಿ ಪನಿಯಾರ ಸವಿಯಲು ಸಿದ್ಧವಾಗುತ್ತದೆ. ಪನಿಯಾರವನ್ನು ಚಟ್ನಿಪುಡಿ ಅಥವಾ ಟೊಮೆಟೋ ಚಟ್ನಿಯೊಂದಿಗೆ ತಿಂದರೆ ಇದರ ರುಚಿ ಮತ್ತಷ್ಟು ಹೆಚ್ಚಾಗಿರುತ್ತದೆ. ಚಟ್ನಿ ಪುಡಿ ಮಾಡುವ ವಿಧಾನವನ್ನು ಈ ಹಿಂದಿನ ಸಂಚಿಕೆಯಲ್ಲಿಯೇ ತಿಳಿಸಲಾಗಿದೆ.