ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆಗಳನ್ನು ಒಡೆದು ರಹಾಕಿ ಚೆನ್ನಾಗಿ ಕಲಕಬೇಕು.
ನಂತರ ಇದಕ್ಕೆ ಹಿಟ್ಟು ಹಾಲು, ವೆನ್ನಿಲ್ಲಾ ಎಸೆನ್ಸ್ ಹಾಗೂ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಮೈಕ್ರೋವೇವ್ ಓವೆನ್ ನಲ್ಲಿ ಇಡಬಹುದಾದ ಪಾತ್ರೆಯೊಂದರಲ್ಲಿ ಬೆಣ್ಣೆಯನ್ನು ಹಾಕಿ ಕರಗಿಸಿಕೊಳ್ಳಬೇಕು. ನಂತರ ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ಮಾಡಿ ಇದನ್ನು ಬಿಸಿ ಮಾಡಿಕೊಳ್ಳಬೇಕು.
ಹುರಿಯುವ ಪಾತ್ರೆಗೆ ಈ ಮೊದಲೇ ಮಾಡಿಟ್ಟುಕೊಂಡ ಮಿಶ್ರಣವನ್ನು 1/4 ಪ್ರಮಾಣದಲ್ಲಿ ಸುರಿದು. 2 ನಿಮಿಷಗಳ ಕಾಲ ಬೇಯಲು ಬಿಡಬೇಕು. ಬಿಸಿಯಾಗುತ್ತಿರುವಾಗ ನೀರನ್ನು ಚಿಮುಕಿಸಿ ಹದ ನೋಡಬಹುದು. ಮಿಶ್ರಣದ ಮೇಲೆ ನೀರಿನ ಹನಿಗಳು ಕಾಣಿಸಿಕೊಂಡರೆ ಸಿದ್ಧವಾಗಿದೆಯೆಂದೇ ಅರ್ಥ. ನಂತರ ಮತ್ತೆ 1-2 ನಿಮಿಷಗಳ ಕಾಲ ಬೇಯಿಸಿ. ತಟ್ಟೆಯೊಂದನ್ನು ತೆಗೆದುಕೊಂಡು ಪ್ಯಾನ್ ಕೇಕ್ ನ್ನು ತೆಗೆದುಹಾಕಿದರೆ ಪ್ಯಾನ್ ಕೇಕ್ ತಯಾರಾಗುತ್ತದೆ.