ಮೊದಲು ಕುಕ್ಕರ್ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಿಸಿಕಾಯಿ ಹಾಗೂ ಅರಿಶಿಣದ ಪುಡಿ, ಸಾಂಬಾರ್ ಪುಡಿ, ಕೊತ್ತಂಬರಿ ಸೊಪ್ಪು, ಟೊಮೆಟೋ. ಉಪ್ಪು, ನೀರುನ್ನು ಹಾಕಿ 3 ಕೂಗನ್ನು ಕೂಗಿಸಿಕೊಳ್ಳಬೇಕು. ನಂತರ ಇದನ್ನು ಇಳಿಸಿಕೊಂಡು ಮಸಿಯುವ ಕೋಲಿನಿಂದ ಚೆನ್ನಾಗಿ ನುಣ್ಣಗಾಗುವವರೆಗೆ ಮಸಿದುಕೊಳ್ಳಬೇಕು
ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಸೊಪ್ಪು, ಒಣಗಿದ ಮೆಣಸಿನ ಕಾಯಿ, ಇಂಗು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನುಣ್ಣಗೆ ಮಾಡಿಕೊಂಡ ಬೇಳೆಯನ್ನು ಇದಕ್ಕೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಂಧ್ರ ಶೈಲಿಯ ಟೊಮೆಟೊ ಪಪ್ಪು ಸವಿಯಲು ಸಿದ್ಧವಾಗುತ್ತದೆ.