ದೊಡ್ಡ ಮೆಣಿಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು ಆರ್ಧ ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಬೆಣ್ಣೆ - ಸ್ವಲ್ಪ
ಮಾಡುವ ವಿಧಾನ...
ಉದ್ದವಾದ ಬ್ರೆಡ್ ವೊಂದನ್ನು ತೆಗೆದುಕೊಂಡು ಮಧ್ಯ ಭಾಗದಲ್ಲಿ ಬೋಟಿನಂತೆ ಹಳ್ಳ ಮಾಡಬೇಕು. ಮಧ್ಯೆಯಿರುವ ಬ್ರೆಡ್ ನ್ನು ತೆಗೆದು ಹಾಕಬೇಕು.
ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ದೊಡ್ಡ ಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದಿಟ್ಟುಕೊಳ್ಳಬೇಕು.
ಪಾತ್ರೆಯೊದನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆ, ಕ್ರೀಮ್, ಖಾರದ ಪುಡಿ, ಕಾಳು ಮೆಣಿಸಿನ ಪುಡಿ, ಉಪ್ಪು ಹುರಿದಿಟ್ಟುಕೊಂಡ ಈರುಳ್ಳಿ, ದೊಡ್ಡ ಮೆಣಿಸಿನ ಕಾಯಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ಬೋಟಿನ ಆಕಾರ ಮಾಡಿಕೊಂಡ ಬ್ರೆಡ್ ಗೆ ಬೆಣ್ಣೆಯನ್ನು ಹಾಕಿ ನಂತರ ಈ ಮಿಶ್ರಣವನ್ನು ಹಾಕಬೇಕು. ನಂತರ ಓವನ್ ನಲ್ಲಿಟ್ಟು 15-20 ನಿಮಿಷಗಳ ಬೇಯಿಸಿದರೆ ರುಚಿಕರವಾದ ಬ್ರೆಡ್ ಎಗ್ ಬೋಟ್ ಸವಿಯಲು ಸಿದ್ಧವಾಗುತ್ತದೆ.