ಮೊದಲು ಅಕ್ಕಿಯನ್ನು ತೊಳೆದು 1 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ನಂತರ ನೀರನ್ನು ಆರಲು ಬಿಟ್ಟು ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಒಲೆಯ ಮೇಲೆ ಹಾಲನ್ನು ಇಟ್ಟು ಹಾಲು ಕಾದನ ನಂತರ ಪುಡಿ ಮಾಡಿಟ್ಟುಕೊಂಡ ಅಕ್ಕಿಯನ್ನು ಹಾಕಬೇಕು. ಇದಕ್ಕೆ ಹುರಿದುಕೊಂಡ ಗಸಗಸೆಯನ್ನು ಹಾಕಬೇಕು. 15 ನಿಮಿಷಗಳ ಚೆನ್ನಾಗಿ ಕುದಿಸಬೇಕು.
ಮತ್ತೊಂದು ಒಲೆ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ತುಪ್ಪವನ್ನು ಹಾಕಿ, ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
ಅಕ್ಕಿ ಹಾಲಿನಲ್ಲಿ ಚೆನ್ನಾಗಿ ಬೆಂದ ನಂತರ ನಂತರ ಇದಕ್ಕೆ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಕೇಸರಿ, ಏಲಕ್ಕಿ ಪುಡಿ ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ಗಸಗಸೆ ಅಕ್ಕಿ ಪಾಯಸ ಸವಿಯಲು ಸಿದ್ಧವಾಗುತ್ತದೆ.