ಮೊದಲು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
ನೆಲಗಡಲೆಯನ್ನು ಸಿಪ್ಪೆ ತೆಗೆದು ಬೀಜವನ್ನು ಬಿಡಿಸಿಕೊಳ್ಳಿ.
ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಇದಕ್ಕೆ ಏಲಕ್ಕಿ ಪುಡಿ ಹಾಗೂ ಲವಂಗವನ್ನು ಹಾಕಬೇಕು. ನಂತರ ತುರಿದ ಸೋರೆಕಾಯಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಮತ್ತೊಂದು ಒಲೆಯ ಮೇಲೆ ಹಾಲನ್ನು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ಇದನ್ನು ಬೇಯಿಸಿಕೊಂಡ ಸೋರೆಕಾಯಿಗೆ ಹಾಕಿ ಮಿಶ್ರಣವನ್ನು ಮಾಡಬೇಕು.
ಸೋರೆಕಾಯಿ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ, ಕೋವಾ ಹಾಗೂ ಕತ್ತರಿಸಿಕೊಂಡ ನಟ್ಸ್ ಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ. ಮುಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಉಳಿದ ನಟ್ಸ್ ಗಳನ್ನು ಇದರ ಮೇಲೆ ಹಾಕಿ ಅಲಂಕಾರ ಮಾಡಿ. ಕೆಲಸ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿರಿಸಿ ತಿಂದರೆ ರುಚಿಕರವಾಗಿರುತ್ತದೆ.