ಮಿಕ್ಸಿ ಜಾರ್ ತೆಗೆದುಕೊಂಡು ನೆನೆದ ಅಕ್ಕಿ,ಉದ್ದಿನ ಬೇಳೆ ಹಾಗೂ ಕಲ್ಲಂಗಡಿ ಹಣ್ಣಿನ ತಿರುಳು ನೀರುಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿಮಿಶ್ರಣ ಮಾಡಬೇಕು.
ಅರ್ಧ ಗಂಟೆಯ ಬಳಿಕ ಒಲೆಯ ಮೇಲೆ ಕಾವಲಿ ಇಟ್ಟುಬಿಸಿಯಾದ ನಂತರ ಹಿಟ್ಟನ್ನು ತೆಳ್ಳಗೆ ದೋಸೆ ಆಕಾರದಲ್ಲಿ ಹಾಕಬೇಕು. ನಂತರ ಎಣ್ಣೆ ಹಾಕಿ ಕೆಂಪಗೆಕಾಯಿಸಿದರೆ. ರುಚಿಕರವಾದ ಕಲ್ಲಂಗಡಿ ಹಣ್ಣಿನ ತಿರುಳಿನ ದೋಸೆ ಸವಿಯಲು ಸಿದ್ಧವಾಗುತ್ತದೆ.