ಮಟನ್ ರೋಸ್ಟ್ ಮಸಾಲಾ

ರುಚಿಕರವಾದ ಮಟನ್ ರೋಸ್ಟ್ ಮಸಾಲಾ ಮಾಡುವ ವಿಧಾನ...
ಮಟನ್ ರೋಸ್ಟ್ ಮಸಾಲಾ
ಮಟನ್ ರೋಸ್ಟ್ ಮಸಾಲಾ
Updated on: 
ಬೇಕಾಗುವ ಪದಾರ್ಥಗಳು
  • ಮೊಸರು - 1 ಬಟ್ಟಲು
  • ಒಣಗಿದ ಮೆಣಸಿನ ಕಾಯಿ - 6-8
  • ಜೀರಿಗೆ - ಸ್ವಲ್ಪ
  • ಸೋಂಪು - ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಶುಂಠಿ, ಬೆಳ್ಳುಳ್ಳಿ - ಸ್ವಲ್ಪ
  • ನಿಂಬೆ ರಸ - 2 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಮಟನ್ - ಅರ್ಧ ಕೆಜಿ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ
  • ಕಾಳು ಮೆಣಸು - ಅರ್ಧ ಚಮಚ
  • ತುಪ್ಪ - ಸ್ವಲ್ಪ
  • ಅರಿಶಿಣ - ಚಿಟಿಕೆ
ಮಾಡುವ ವಿಧಾನ...
  • ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ನಂತರ ತೊಳೆದ ಮಟನ್, ಸ್ವಲ್ಪ ನೀರು ಹಾಗಿ 35-40 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಬೇಕು. 
  • ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊಸರು, ಒಣಗಿದ ಮೆಣಸಿನ ಕಾಯಿ, ಜೀರಿಗೆ, ಸೋಂಪು, ಉಪ್ಪು, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ, ಕಾಳು ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅಗತ್ಯವೆನಿಸಿದರೆ, ಚಕ್ಕೆ, ಲವಂಗವನ್ನು ಹಾಕಬಹುದು. 
  • ಬೆಂದ ಮಟನ್ ಗೆ ಈ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಮಸಾಲೆ ಗಟ್ಟಿಯಾದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ಮಟನ್ ಘೀ ರೋಸ್ಟ್ ಮಸಾಲಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com