ಬಾದುಷ

ರುಚಿಕರ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾದುಷ ಮಾಡುವ ವಿಧಾನ...
ಬಾದುಷ
ಬಾದುಷ
Updated on: 
ಬೇಕಾಗುವ ಪದಾರ್ಥಗಳು...
  • ಮೈದಾಹಿಟ್ಟು - 2 ಬಟ್ಟಲು
  • ಅಡುಗೆ ಸೋಡಾ - ಚಿಟಿಕೆ
  • ಮೊಸರು- ಕಾಲು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಡಾಲ್ಡಾ (ತುಪ್ಪ) - ಅರ್ಧ ಬಟ್ಟಲು
  • ಎಣ್ಣೆ - ಕರಿಯಲು 
  • ಸಕ್ಕರೆ - 1 1/2 ಬಟ್ಟಲು
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು. 
  • ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. ಪಾಕ ತಯಾರಾದ ಬಳಿಕ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಬೇಕು. 
  • ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. 
  • ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಗಾತ್ರಕ್ಕೆ ತಟ್ಟಿ, ಉಂಡೆ ಮಧ್ಯೆ ಬೆರಳಿನಿಂದ ಹಳ್ಳ ಮಾಡಬೇಕು. (ಹಳ್ಳ ಮಾಡುವುದರಿಂದ ಎಣ್ಣೆಗೆ ಹಾಕಿದಾಗ ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಸಹಾಯವಾಗುತ್ತದೆ).
  • ಎಣ್ಣೆಯನ್ನು ಬಹಳ ಕಾಯಿಸಬಾರದು. ಸ್ವಲ್ಪ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿಯೇ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು. ನಂತರ ಪಾಕಕ್ಕೆ ಇದನ್ನು ಹಾಕಿ 5 ನಿಮಿಷಗಳ ನಂತರ ತೆಗೆದರೆ ರುಚಿಕರವಾದ ಬಾದುಷ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com