ಜಿಲೇಬಿ

ರುಚಿಕರ ಹಾಗೂ ಗರಿ ಗರಿಯಾದ ಜಿಲೇಬಿ ಮಾಡುವ ವಿಧಾನ...
ಜಿಲೇಬಿ
ಜಿಲೇಬಿ
ಬೇಕಾಗುವ ಪದಾರ್ಥಗಳು...
  • ಮೈದಾ - 2 ಬಟ್ಟಲು
  • ಸಕ್ಕರೆ - 1/2 ಬಟ್ಟಲು
  • ತುಪ್ಪ - 1 ಚಮಚ
  • ಮಜ್ಜಿಗೆ - ಅರ್ಧ ಬಟ್ಟಲು
  • ಅಡುಗೆ ಎಣ್ಣೆ - ಕರಿಯಲು
ಮಾಡುವ ವಿಧಾನ...
  • ಮೈದಾ ಹಿಟ್ಟಿಗೆ ಮಜ್ಜಿಗೆ ಹಾಕಿ ಕಲಸಬೇಕು. ಈ ಹಿಟ್ಟು ಒಂದು ರಾತ್ರಿಯಿಡೀ ನೆನೆಯಲು ಬಿಡಬೇಕು. ಮರುದಿನ ಹಿಟ್ಟಿಗೆ  2-3 ಚಮಚ ಮೈದಾ, ತುಪ್ಪ ಸೇರಿಸಿ ಮಿಶ್ರಣ ಮಾಡಬೇಕು. 
  • ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಸಕ್ಕರೆ ಹಾಕಿ ಸಕ್ಕರೆ ಮುಳುಗುವಷ್ಟು ನೀರು ಹೇಕಿ ಪಾಕ ತಯಾರು ಮಾಡಿಕೊಳ್ಳಬೇಕು. 
  • ಪಾಕ ಹದಕ್ಕೆ ಬಂದನ ನಂತರ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊಟ್ಟು ಇಳಿಸಬೇಕು. 
  • ಬಾಣಲೆಯ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾಯಲು ಬಿಡಬೇಕು. 
  • ಕಲಸಿಟ್ಟುಕೊಂಡ ಹಿಟ್ಟನ್ನು ಒಂದು ಜಿಲೇಬಿ ತೂತಿನ ಪರಿಕರದಲ್ಲಿ ವೃತ್ತಾಕಾರವಾಗಿ ಎಣ್ಣೆಗೆ ಬಿಡಬೇಕು. ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ತೆಗೆದು ಸಕ್ಕರೆ ಪಾಕಕ್ಕೆ ಹಾಕಬೇಕು. 5 ನಿಮಿಷಗಳ ಬಳಿಕ ಪಾಕದಿಂದ ತೆಗೆಯಬೇಕು. ಹೀಗೆ ಮಾಡಿದರೆ ರುಚಿಕರವಾದ ಹಾಗೂ ಗರಿ ಗರಿಯಾದ ಜಿಲೇಬಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com