ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿಡಬೇಕು.
ಪ್ರೆಷರ್ ಕುಕ್ಕರ್ ತೆಗೆದುಕೊಂದು ಅದಕ್ಕೆ ಸ್ವಲ್ಫ ಮಾಂಸವನ್ನು ಹಾಗಿ ಮಧ್ಯಮಗಾತ್ರದ ಲೋಟದಲ್ಲಿ 2-3 ಲೋಟ ನೀರು, ಎಣ್ಣೆ, ಅಜಿನೋಮೋಟೋ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ 4 ಕೂಗು ಕೂಗಿಸಿಕೊಳ್ಳಬೇಕು.
ನಂತರ ಬೆಂದ ಮಾಂಸವನ್ನು ತೆಗೆದು ನೀರು ಹೋಗುವಂತೆ ಮಾಡಬೇಕು. ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಕಾರ್ನ್ ಫ್ಲೋರ್, ಮೊಟ್ಟೆ, ಸೋಯಾಸಾಸ್, ಚಿಲ್ಲಿ ಸಾಸ್, ಸಾಸಿವೆಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟು ಸ್ವಲ್ಪ ಗಟ್ಟಿಯಿರುವಂತೆಯೇ ಮಾಡಿಕೊಳ್ಭಬೇಕು. ಅಗತ್ಯಬಿದ್ದರೆ, ಹಾಲು ಸೇರಿಸಬಹುದು.
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ಎಣ್ಣೆ ಕಾದ ನಂತರ ಬೇಯಿಸಿದ ಮಾಂಸದ ಚೂರುಗಳನ್ನು ಮಿಶ್ರಣದಲ್ಲಿ ಅದ್ದಿಕೊಂಡು ಎಣ್ಣೆಗೆ ಹಾಕಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಕ್ರಿಸ್ಪಿ ಚಿಕನ್ ಪಕೋಡಾ ಸವಿಯಲು ಸಿದ್ಧ.