ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಇದಕ್ಕೆ ಪನ್ನೀರ್ ತುಂಡುಗಳನ್ನು ಹಾಗಿ ಎರಡೂ ಬದಿಗಳಲ್ಲೂ ಕೆಂಪಗಾಗುವಂತೆ ಹುರಿದುಕೊಳ್ಳಬೇಕು.
ನಂತರ ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಸಾಸಿರವೆ, ಈರುಳ್ಳಿ, ಹಸಿಮೆಣಸಿನ ಹಾಕಿ ಕೆಂಪಗೆ ಹುರಿದುಕೊಳ್ಳಬೇಕಿ. ಇದಕ್ಕೆ ಟೊಮೆಟೋ ಪ್ಯೂರಿ, ಈರುಳ್ಳಿ ಪ್ಯೂರಿ, ಗರಂ ಮಸಾಲೆ ಪುಡಿ, ಕಾಶ್ಮೀರಿ ಮಿರ್ಚಿ ಪೌಡರ್ ಹಾಗೂ ಧನಿಯಾ ಪುಡಿ ಹಾಕಿ ಹುರಿಯಬೇಕು.
ನಂತರ ಇದಕ್ಕೆ ಪನ್ನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಕತ್ತರಿಸಿಕೊಂಡ ಕೋಳಿಮಾಂಸ, ಉಪ್ಪು ಹಾಕಿ ಮಾಂಸ ಬೇಯಲು ಬಿಡಬೇಕು. ನಡುವಲ್ಲಿ ಮಧ್ಯೆಮಧ್ಯೆ ಕೈಯಾಡಿಸುತ್ತಿರಬೇಕು. ಈ ರೀತಿ 10-15 ನಿಮಿಷಗಳ ಬೇಯಿಸಿದರೆ ರುಚಿಕರವಾಗ ಪನ್ನೀರ್ ಚಿಕನ್ ಗ್ರೇವಿ ಸವಿಯಲು ಸಿದ್ಧ.