ಹೆಸರುಬೇಳೆ ಪಾಯಸ
ಹೆಸರುಬೇಳೆ ಪಾಯಸ

ಹೆಸರುಬೇಳೆ ಪಾಯಸ

ಶಿವನಿಗೆ ಪ್ರಿಯವಾದ ಹೆಸರುಬೇಳೆ ಪಾಯಸ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
  • ಹೆಸರುಬೇಳೆ - 1 ಬಟ್ಟಲು
  • ಹಾಲು - 3 ಬಟ್ಟಲು
  • ಸಕ್ಕರೆ - 1 ಬಟ್ಟಲು
  • ಏಲಕ್ಕಿ ಪುಡಿ - ಸ್ವಲ್ಪ
  • ಕೇಸರಿ ದಳ - 2-3 
  • ದ್ರಾಕ್ಷಿ, ಗೋಡಂಬಿ - ಸ್ವಲ್ಪ
  • ತುಪ್ಪ - 3-4 ಚಮಚ
ಮಾಡುವ ವಿಧಾನ...
  • ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಹಾಲನ್ನು ಕುದಿಸಬೇಕು. 
  • ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಸರುಬೇಳೆ ಹಾಗೂ ಬೇಯಲು ನೀರು ಹಾಕಿ 2-3 ವಿಶಲ್ ಕೂಗಿಸಿಕೊಳ್ಳಬೇಕು. 
  • ನಂತರ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ಸಕ್ಕರೆಯನ್ನು ಹಾಗೂ ಸಕ್ಕರೆ ಸಂಪೂರ್ಣ ಕರಗುವವರೆಗೂ ಕೈಯಿಂದ ಕೆದಕುತ್ತಿರಬೇಕು. 
  • ನಂತರ ಕಾದ ಹಾಲನ್ನು ಇದಕ್ಕೆ ಹಾಗಿ 5-10 ನಿಮಿಷ ಕುದಿಸಬೇಕು. 
  • ಪ್ಯಾನ್ ವೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ಬೆಂದ ಹೆಸರುಬೇಳೆಗೆ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಹಾಕಿ 3 ನಿಮಿಷ ಕುದಿಸಿದರೆ ರುಚಿಕರವಾದ ಶಿವನಿಗೆ ಪ್ರಿಯವಾದ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ. 

Related Stories

No stories found.

Advertisement

X
Kannada Prabha
www.kannadaprabha.com