ಬ್ರೆಡ್ ದೋಸೆ

ಸುಲಭವಾಗಿ, ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ಬ್ರೆಡ್ ದೋಸೆ ಮಾಡುವ ವಿಧಾನ...
ಬ್ರೆಡ್ ದೋಸೆ
ಬ್ರೆಡ್ ದೋಸೆ
ಬೇಕಾಗುವ ಪದಾರ್ಥಗಳು
  • ಬ್ರೆಡ್ ಸ್ಲೈಸ್ ಗಳು -10-12
  • ರವೆ - ಅರ್ಧ ಬಟ್ಟಲು
  • ಮೊಸರು - ಅರ್ಧ ಬಟ್ಟಲು
  • ಅಕ್ಕಿ ಹಿಟ್ಟು - ಒಂದೂವರೆ ಬಟ್ಟಲು
  • ಅಡುಗೆ ಸೋಡಾ - ಚಿಟಿಕೆ
  • ಉಪ್ಪು - ರುಚಿಗೆ ತಕ್ಕಷ್ಟು
  • ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
  • ಎಣ್ಣೆ - 2-3 ಚಮಚ
  • ಜೀರಿಗೆ - ಸ್ವಲ್ಪ
  • ಸಾಸಿವೆ - ಸ್ವಲ್ಪ
  • ಉದ್ದಿನಬೇಳೆ, ಕಡಲೆಬೇಳೆ - ಸ್ವಲ್ಪ
  • ಕರಿಬೇವು - 3-4 ಹೆಚ್ಚಿದ್ದು
  • ಹಸಿಮೆಣಿಸಿನ ಕಾಯಿ - 3-4 ಹೆಚ್ಚಿದ್ದು
  • ಈರುಳ್ಳಿ - 1 ಸಣ್ಣದಾಗಿ ಹೆಚ್ಚಿದ್ದು
ಮಾಡುವ ವಿಧಾನ...
  • ಬ್ರೆಡ್ ನ ನಾಲ್ಕು ಬದಿಯಲ್ಲಿರುವ ಕಂದು ಬಣ್ಣದ ಭಾಗವನ್ನು ಕತ್ತರಿಸಿ ತೆಗೆದುಕೊಳ್ಳಬೇಕು. 
  • ನೀರಿನಲ್ಲಿ 2 ನಿಮಿಷಗಳ ಕಾಲ ಬ್ರೆಡ್ ತುಂಡುಗಳನ್ನು ನೆನೆ ಹಾಕಬೇಕು. 
  • ಪಾತ್ರೆಯೊಂದಕ್ಕೆ ರವೆ, ಅಕ್ಕಿ ಹಿಟ್ಟು ಮತ್ತು ನೀರನ್ನು ಸೇರಿಸಿ ಹಿಟ್ಟ ದಪ್ಪಗಿರುವಂತೆ ಕಲಸಿಕೊಳ್ಳಬೇಕು. 
  • ನೀರಿನಿಂದ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹಿಸುಕಬೇಕು. ನಂತರ ಇದನ್ನು ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟಿನಲ್ಲಿ ಯಾವುದೇ ಗಂಟುಗಳು ಇರದಂತೆ ನೋಡಿಕೊಳ್ಳಬೇಕು. 
  • ನಂತರ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆಯ ಎಲ್ಲಾ ಪದಾರ್ಥಗಳನ್ನು ಹಾಕಿ ಕೆಂಪಗೆ ಮಾಡಿಕೊಂಡು ಇದನ್ನು ಹಿಟ್ಟಿನೊಳಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸೌಟಿನಿಂದ ಹಿಟ್ಟನ್ನು ಹಾಕಿ ದೋಸೆಯಾಕಾರಕ್ಕೆ ಬರುವಂತೆ ಮಾಡಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಬ್ರೆಡ್ ದೋಸೆ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com