ಮೊದಲು ಮಾಂಸವನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು.
ನಂತರ ಪಾತ್ರೆಯೊಂದಕ್ಕೆ ಉಪ್ಪು, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪುಡಿ, ಕಾಳು ಮೆಣಿಸಿನ ಪುಡಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಹೊಡೆದು ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಮಸಾಲೆಯಲ್ಲಿ ನೆನೆದ ಮಾಂಸವನ್ನು ಮೈದಾ ಹಿಟ್ಟಿನಲ್ಲಿ ಹೊರಳಿಸಿ ನಂತರ ಮೊಟ್ಟೆಯಲ್ಲಿ ಅದ್ದಿ ಮತ್ತೆ ಮೈದಾ ಹಿಟ್ಟಿನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ 2 ನಿಮಿಷ ಕರಿದು ತೆಗೆಯಬೇಕು. ತಣ್ಣಗಾದ ನಂತರ ಮತ್ತೆ ಎಣ್ಣೆಗೆ ಹಾಕಿ ಚೆನ್ನಾಗಿ ಕರಿದರೆ ರುಚಿಕರವಾದ ಡ್ರೈ ಚಿಕನ್ ಪಾಪರ್ಸ್ ಸವಿಯಲು ಸಿದ್ಧ.