ನಂತರ ಪಾತ್ರೆಯೊಂದಕ್ಕೆ ಅರಿಶಿನ, ಕಾಶ್ಮೀರಿ ಚಿಲ್ಲಿ ಪೌಡರ್, ಜೀರಿಗೆ ಪುಡಿ, ಸೋಂಪು ಪುಡಿ, ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ನಿಂಬೆಹಣ್ಣಿನ ರಸ, ಎಣ್ಣೆ, ಕರಿಬೇವು, ಉಪ್ಪು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಈಗಾಗಲೇ ಶುಚಿ ಮಾಡಿಕೊಂಡ ಮೀನಿಗೆ ಈ ಮಸಾಲಾವನ್ನು ಚೆನ್ನಾಗಿ ಕೋಟ್ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಬೇಕು.
ನಂತರ ಬಾಣಲೆಗೆ 6-7 ಚಮಚ ಎಣ್ಣೆಯನ್ನು ಹಾಕಿ ಮಸಾಲಾದಲ್ಲಿ ನೆನೆದ ಫಿಶ್ ನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಫ್ರೈ ಮಾಡಿಕೊಂಡರೆ ರುಚಿಕರವಾಗ ಫಿಶ್ ಫ್ರೈ ಸವಿಯಲು ಸಿದ್ಧ.