ಹುಣಸೆ ಹುಳಿ ಚಿತ್ರಾನ್ನ

ಹುಣಸೆ ಹುಳಿ ಚಿತ್ರಾನ್ನ ಮಾಡುವ ವಿಧಾನ...
ಹುಣಸೆ ಹುಳಿ ಚಿತ್ರಾನ್ನ
ಹುಣಸೆ ಹುಳಿ ಚಿತ್ರಾನ್ನ
ಬೇಕಾಗುವ ಪದಾರ್ಥಗಳು
  • ಅಕ್ಕಿ - 1 ಬಟ್ಟಲು
  • ಹುಣಸೆ ರಸ - ಅರ್ಧ ಬಟ್ಟಲು
  • ಬೆಲ್ಲ - ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ತೆಂಗಿನ ತುರಿ - ಸ್ವಲ್ಪ
  • ಈರುಳ್ಳಿ - 1 
  • ಬೆಳ್ಳುಳ್ಳಿ 6-7 ಎಸಳು
  • ಹಸಿಮೆಣಸಿನ ಕಾಯಿ - 2 
  • ಒಣಗಿದ ಮೆಣಸಿನ ಕಾಯಿ - 3-4
  • ಎಣ್ಣೆ - ಸ್ವಲ್ಪ
  • ಕಡಲೆಕಾಯಿ ಬೀಡ - ಸ್ವಲ್ಪ
  • ಸಾಸಿವೆ - ಸ್ವಲ್ಪ
  • ಕರಿಬೇವು - ಸ್ವಲ್ಪ
  • ಅರಿಶಿನ - ಸ್ವಲ್ಪ
ಮಾಡುವ ವಿಧಾನ...
  • ಅಕ್ಕಿಯನ್ನು ಚೆನ್ನಾಗಿ ತೊಳೆದು ಅನ್ನ ಮಾಡಿಟ್ಟುಕೊಳ್ಳಬೇಕು. ಹುಣಸೆಹಣ್ಣಿಗೆ ನೀರು ಹಾಕಿ ಚೆನ್ನಾಗಿ ನೆನೆಸಿ, ರಸ ತೆಗೆದಿಟ್ಟುಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆಇಟ್ಟು, ಅದಕ್ಕೆ ಎಣ್ಣೆ, ಸಾಸಿವೆ, ಕರಿಬೇವು, ಕಡಲೆಕಾಯಿ ಬೀಜ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು. 
  • ನಂತರ ಒಣಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ, ಅರಿಶಿನ, ಜಜ್ಜಿದ ಬೆಳ್ಳಿಳ್ಳು, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ ಹುಣಸೆ ಹಣ್ಣಿನ ರಸ, ಬೆಲ್ಲ ಹಾಗೂ ಉಪ್ಪು ಹಾರಿ 5-6 ನಿಮಿಷ ಕುದಿಸಬೇಕು. ನಂತರ ಗೊಜ್ಜಿನಂತೆ ಗಟ್ಟಿಯಾಗುತ್ತದೆ. ನಂತರ ಕೆಳಗಿಳಿಸಿ ಅನ್ನವನ್ನು ಮಿಶ್ರಣ ಮಾಡಿದರೆ ರುಚಿಕರವಾದ ಹುಣಸೆ ಹಣ್ಣಿನ ಚಿತ್ರಾನ್ನ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com