ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಂಡು ಕತ್ತರಿಸಿಕೊಂಡು ನೀರಿನಲ್ಲಿ ಚೆನ್ನಾಗಿ ಬೇಯಲು ಬಿಡಬೇಕು.
ಬೆಂದ ಆಲೂಗಡ್ಡೆಯನ್ನು ತೆಗೆದುಕೊಂಡು ಅದಕ್ಕೆ, 1 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಕಾಳು ಮೆಣಸಿನ ಪುಡಿ ಚೆನ್ನಾಗಿ ಮಿಶ್ರಣ ಮಾಡಿ ಆಲೂಗಡ್ಡೆಯನ್ನು ನುಣ್ಣಗೆ ಹಿಸುಕಿಕೊಳ್ಳಬೇಕು.
ಬೋನ್ ಲೆಸ್ ಚಿಕನ್ ನನ್ನು ಕೀಮಾದಂತೆ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಅದಕ್ಕೆ ಜೀರಿಗೆ ಪುಡಿ, 1 ಚಮಚ ಅಚ್ಚ ಖಾರದ ಪುಡಿ, ಉಪ್ಪು, ಕಾಳು ಮೆಣಿಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಹೆಚ್ಚಿಕೊಂಡ ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಮಿಶ್ರಣ ಮಾಡಿಕೊಂಡ ಚಿಕನ್ ಪೀಸ್ ಗಳು ಹಾಗೂ ಸ್ವಲ್ಪ ನೀರು ಹಾಕಿ 5-10 ನಿಮಿಷ ಬೇಯಿಸಿಕೊಳ್ಳಬೇಕು.
ನಂತರ ಆಲೂ ಮಿಶ್ರಣವನ್ನು ಸಣ್ಣ ಉಂಡೆಯಂತೆ ತೆಗೆದುಕೊಂಡು ಚಿಕ್ಕ ಪೂರಿಯಂತೆ ಕೈಯಲ್ಲೇ ತಟ್ಟಿ ಅದರ ಮಧ್ಯೆ ಬಂದ ಚಿಕನ್ ಹಾಕಿ ಮುಚ್ಚಿ ಉಂಡೆ ಮಾಡಿಕೊಳ್ಳಬೇಕು.
ಈ ಉಂಡೆಯನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪೌಡರ್ ನಲ್ಲಿ ಅದ್ದಿ ಎಣ್ಣೆಗೆ ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಆಲೂ ಚಿಕನ್ ಬಾಂಬ್ ಸವಿಯಲು ಸಿದ್ಧ.