ಪನ್ನೀರ್ ಕೀರು

ರುಚಿಕರವಾದ ಪನ್ನೀರ್ ಕೀರು ಮಾಡುವ ವಿಧಾನ...
ಪನ್ನೀರ್ ಕೀರು
ಪನ್ನೀರ್ ಕೀರು
ಬೇಕಾಗುವ ಪದಾರ್ಥಗಳು
  • ತುಪ್ಪ - 1 ಚಮಚ
  • ದ್ರಾಕ್ಷಿ - ಸ್ವಲ್ಪ
  • ಗೋಡಂಬಿ - ಸ್ವಲ್ಪ
  • ಹಾಲು - 3 ಬಟ್ಟಲು
  • ಸಕ್ಕರೆ - 1/4 ಬಟ್ಟಲು
  • ಪನ್ನೀರ್ - ಅರ್ಧ ಬಟ್ಟಲು
  • ಏಲಕ್ಕಿ ಪುಡಿ - ಚಿಟಿಕೆಯಷ್ಟು
ಮಾಡುವ ವಿಧಾನ...
  • ಮೊದಲು ಬಾಣಲೆಗೆ 1 ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ಹಾಲನ್ನು ಹಾಕಿ ಕಾಯಲು ಬಿಡಬೇಕು. ಆಗಾಗ ಕೈಯಾಡಿಸಿ ಹಾಲು ಗಟ್ಟಿಯಾಗುವಂತೆ ಕಾಯಿಸಬೇಕು. 
  • ಹಾಲು ಗಟ್ಟಿಯಾದ ಬಳಿಕ ಸಕ್ಕರೆ, ಪನ್ನೀರ್ ಹಾಕಿ 5 ನಿಮಿಷಗಳ ಕಾಲ ಕಾಯಲು ಬಿಟ್ಟು, ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿದರೆ ರುಚಿಕರವಾದ ಪನ್ನೀರ್ ಕೀರ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com