ಮಿಕ್ಸ್ ವೆಜ್ ಕರ್ರಿ

ರುಚಿಕರವಾದ ಮಿಕ್ಸ್ ವೆಜ್ ಕರ್ರಿ ಮಾಡುವ ವಿಧಾನ...
ಮಿಕ್ಸ್ ವೆಜ್ ಕರ್ರಿ
ಮಿಕ್ಸ್ ವೆಜ್ ಕರ್ರಿ
ಬೇಕಾಗುವ ಪದಾರ್ಥಗಳು...
  • ಎಣ್ಣೆ -3-4 ಚಮಚ
  • ಪನ್ನೀರ್ - 12 ಸಣ್ಣ ತುಂಡುಗಳು
  • ಬಾದಾಮಿ (ನೆನೆಸಿ ಸಿಪ್ಪೆ ತೆಗೆದದ್ದು) - 10-15
  • ಆಲೂಗಡ್ಡೆ - 1 ಬಟ್ಟಲು
  • ಕ್ಯಾರೆಟ್- ಅರ್ಧ ಬಟ್ಟಲು
  • ಹೂಕೋಸು - 1 ಬಟ್ಟಲು
  • ಬೀನ್ಸ್ - ಅರ್ಧ ಬಟ್ಟಲು
  • ಬಟಾಣಿ- 1 ಬಟ್ಟಲು
  • ಪಲಾವ್ ಎಲೆ - 2-3
  • ಜೀರಿಗೆ - ಅರ್ಧ ಚಮಚ
  • ಕಸೂರಿ ಮೇಥಿ - ಅರ್ಧ ಚಮಚ
  • ಹಸಿ ಮೆಣಸಿನಕಾಯಿ - ಸಣ್ಣಗೆ ಹೆಚ್ಚಿದ್ದು 1 
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಶುಂಠಿ,ಬೆಳ್ಳುಳ್ಳಿ ಪೇಸ್ಟ್ - ಚಮಚ
  • ಅರಿಶಿನದ ಪುಡಿ - ಅರ್ಧ ಚಮಚ
  • ಅಚ್ಚ ಖಾರದ ಪುಡಿ - 1 ಚಮಚ
  • ದನಿಯಾ ಪುಡಿ - 1 ಚಮಚ
  • ಗರಂ ಮಸಾಲೆ ಪುಡಿ - ಅರ್ಧ ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಟೊಮೆಟೋ - 2 
  • ಚಕ್ಕೆ  1-2
  • ಲವಂಗ - 2-3
  • ಏಲಕ್ಕಿ - 1 
  • ಮೊಸರು - ಬಟ್ಟಲು
  • ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ...
  • ಮೊದಲು ಬಾಣೆಲೆಗೆ ಎಣ್ಣೆ ಹಾಕಿ ಪನ್ನೀರ್ ನ್ನು ಕೆಂಪಗೆ ಹುರಿದುಕೊಳ್ಳಬೇಕು. ಅದನ್ನು ಒಂದು ಪ್ಲೇಟ್ ಗೆ ತೆಗೆದಿಡಬೇಕು. 
  • ಇದೇ ಬಾಣೆಲೆಗೆ ಬಾದಾಮಿಗಳನ್ನು ಹಾಕಿ ಕೆಂಪಗೆ ಹುರಿದು, ಪಕ್ಕಕ್ಕೆ ಎತ್ತಿಡಬೇಕು. 
  • ನಂತರ ಆಲೂಗಡ್ಡೆ, ಕ್ಯಾರೆಟ್, ಹೂಕೋಸು, ಬೀನ್ಸ್, ಬಟಾಣಿಯನ್ನು ಎಣ್ಣೆಯಲ್ಲಿ ಹುರಿದು ಪಕ್ಕಕ್ಕೆ ಎತ್ತಿಡಬೇಕು. 
  • ಬಳಿಕ ಇದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಪಲಾವ್ ಎಲೆ, ಜೀರಿಗೆ, ಕಸೂರಿ ಮೇಥಿ, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. 
  • ಇದಕ್ಕೆ ಈರುಳ್ಳಿ ಹಾಕಿ ಕೆಂಪಗಾದ ಬಳಿಕ ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಟೊಮೆಟೋ, ಚಕ್ಕೆ, ಲವಂಗ ಹಾಗೂ ಹುರಿದಿಟ್ಟುಕೊಂಡಿದ್ದ ಗೋಡಂಬಿಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. 
  • ರುಬ್ಬಿಂದ ಟೊಮೆಟೋವನ್ನು ಈಗಾಗಲೇ ತಯಾರು ಮಾಡಿಕೊಂಡ ಮಸಾಲೆಗೆ ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಮೊಸರು ಹಾಕಿ 2 ನಿಮಿಷ ಬಿಟ್ಟು ಹುರಿದಿಟ್ಟುಕೊಂಡಿದ್ದ ತರಕಾರಿಗಳನ್ನು ಹಾಕಿ ಸ್ವಲ್ಪ ನೀರು ಹಾಗಿ ಬೇಯಲು ಬಿಡಬೇಕು. 
  • ನಂತರ ಕೊತ್ತಂಬರಿ ಸೊಪ್ಪು ಹಾಗೂ ಕಸೂರಿ ಮೇಥಿಯಿಂದ ಅಲಂಕರಿಸಿದರೆ, ರುಚಿಕರವಾದ ಮಿಕ್ಸ್ ವೆಜ್ ಕರ್ರಿ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com