ಪಾಲಾಕ್ ಪನ್ನೀರ್

ರುಚಿಕರವಾದ ಪಾಲಾಕ್ ಪನ್ನೀರ್ ಮಾಡುವ ವಿಧಾನ...
ಪಾಲಾಕ್ ಪನ್ನೀರ್
ಪಾಲಾಕ್ ಪನ್ನೀರ್
ಬೇಕಾಗುವ ಪದಾರ್ಥಗಳು
  • ಪಾಲಾಕ್ ಸೊಪ್ಪು - 2 ಬಟ್ಟಲು
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳು - ಸ್ವಲ್ಪ
  • ಹಸಿಮೆಣಸಿನ ಕಾಯಿ -3-4
  • ಉಪ್ಪು - ರುಚಿಗೆ ತಕ್ಕಷ್ಟು
  • ಜೀರಿಗೆ - ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಪನ್ನೀರ್ - 
  • ಕಸೂರಿ ಮೇಥಿ - ಸ್ವಲ್ಪ
  • ಚಕ್ಕೆ - 1-2
  • ಲವಂಗ- 2-3
  • ಏಲಕ್ಕಿ - 2 
  • ಪಲಾವ್ ಎಲೆ - 1-2
  • ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಟೊಮೊಟೋ  - ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಎಣ್ಣೆ - ಸ್ವಲ್ಪ
  • ಪನ್ನೀರ್ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು- 11
ಮಾಡುವ ವಿಧಾನ...
  • ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಹಾಕಿ 2-5 ನಿಮಿಷ ಬೇಯಿಸಿಕೊಳ್ಳಬೇಕು. 
  • ನಂತರ ಸೊಪ್ಪನ್ನು ತೆಗೆದು ತಣ್ಣನೆಯ ನೀರಿಗೆ ಹಾಕಿ ನಂತರ ಮಿಕ್ಸಿ ಜಾರ್ ಗೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ರುಬ್ಬಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರ್'ನ್ನು ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. 
  • ನಂತರ ಇದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಕೆಂಪಗಿ ಹುರಿದು, ನಂತರ ಈರುಳ್ಳಿ, ಟೊಮೆಟೋ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ರುಬ್ಬಿಟ್ಟಕೊಂಡ ಮಿಶ್ರಣವನ್ನು ಹಾಕಿ ಕುದಿಯಲು ಬಿಡಬೇಕು. ನಂತರ ಪನ್ನೀರ್, ಉಪ್ಪು, ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಕುದಿಯಲು ಬಿಟ್ಟರೆ ರುಚಿಕರವಾದ ಪಾಲಾಕ್ ಪನ್ನೀರ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com