ಟೊಮೆಟೋ ಚಿಲ್ಲಿ ಕರ್ರಿ

ರುಚಿಕರವಾದ ಟೊಮೆಟೋ ಚಿಲ್ಲಿ ಕರ್ರಿ ಮಾಡುವ ವಿಧಾನ...
ಟೊಮೆಟೋ ಚಿಲ್ಲಿ ಕರ್ರಿ
ಟೊಮೆಟೋ ಚಿಲ್ಲಿ ಕರ್ರಿ
ಬೇಕಾಗುವ ಪದಾರ್ಥಗಳು
  • ಎಣ್ಣೆ- ಸ್ವಲ್ಪ
  • ಸಾಸಿವೆ -ಸ್ವಲ್ಪ
  • ಹಸಿಮೆಣಸಿನ ಕಾಯಿ- 4-5
  • ಕರಿಬೇವು- ಸ್ವಲ್ಪ
  • ಶುಂಠಿ-ಬೆಳ್ಳುಳ್ಳು ಪೇಸ್ಟ್-ಸ್ವಲ್ಪ
  • ಅರಿಶಿಣ- ಚಿಟಿಕೆಯಷ್ಟು
  • ಅಚ್ಚ ಖಾರದ ಪುಡಿ- ಅರ್ಧ ಚಮಚ
  • ದನಿಯಾ ಪುಡಿ - ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕಡಲೆಕಾಯಿ ಬೀಜ, ಎಳ್ಳು ಪುಡಿ- 1 ಚಮಚ
  • ಕೊಬ್ಬರಿ ಪುಡಿ - ಸ್ವಲ್ಪ
  • ಟೊಮೆಟೋ - 4-5
  • ಹುಣಸೆ ಹಣ್ಣಿನ ರಸ - 1 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಜೀರಿಗೆ ಪುಡಿ - ಅರ್ಧ ಚಮಚ
ಮಾಡುವ ವಿಧಾನ...
  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಸಾಸಿವೆ, ಹಸಿಮೆಣಸಿನ ಕಾಯಿ ಹಾಗೂ ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ಬಳಿಕ ಶುಂಠಿ, ಬೆಳ್ಳುಳ್ಳು ಪೇಸ್ಟ್, ಅರಿಶಿಣ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಉಪ್ಪು, ಕಡಲೆಕಾಯಿ ಬೀಜ, ಎಳ್ಳು ಪುಡಿ, ಕೊಬ್ಬರಿ ಪುಡಿ, ಸಣ್ಣಗೆ ಹೆಚ್ಚಿದ ಟೊಮೆಟೋ, ಹುಣಸೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕುದಿಸಿದರೆ ರುಚಿಕರವಾದ ಟೊಮೆಟೋ ಕರ್ರಿ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com