ಬಟಾಣಿ ಪಲಾವ್

ರುಚಿಕರವಾದ ಬಟಾಣಿ ಪಲಾವ್ ಮಾಡುವ ವಿಧಾನ...
ಬಟಾಣಿ ಪಲಾವ್
ಬಟಾಣಿ ಪಲಾವ್
ಬೇಕಾಗುವ ಪದಾರ್ಥಗಳು
  • ತುಪ್ಪ - 2 ಚಮಚ
  • ಪಲಾವ್ ಎಲೆ - 1-2 
  • ಚಕ್ಕೆ - 1 
  • ಮರಾಠಿ ಮೊಗ್ಗು - 1
  • ಕಾಳು ಮೆಣಸು - 10 
  • ಲವಂಗ - 3-4
  • ಜೀರಿಗೆ - ಸ್ವಲ್ಪ
  • ಗೋಡಂಬಿ - 6
  • ಬಾಸುಮತಿ ಅಕ್ಕಿ - 1 ಬಟ್ಟಲು (30 ನಿಮಿಷ ನೆನೆಸಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು
  • ಗರಂ ಮಸಾಲಾ - ಅರ್ಧ ಚಮಚ
  • ಬಟಾಣಿ - ಮುಕ್ಕಾಲು ಬಟ್ಟಲು
ಮಾಡುವ ವಿಧಾನ...
  • ಪ್ರೆಷರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಬೇಕು. 
  • ತುಪ್ಪ ಕಾದ ನಂತರ ಪಲಾವ್ ಎಲೆ, ಚಕ್ಕೆ, ಮರಾಠಿ ಮೊಗ್ಗು, ಕಾಳು ಮೆಣಸು, ಲವಂಗ, ಜೀರಿಗೆ, ಗೋಡಂಬಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಬಾಸುಮತಿ ಅಕ್ಕಿ, ಉಪ್ಪು, ಗರಂ ಮಸಾಲಾ, ಬಟಾಣಿ, ಮುಕ್ಕಾಲು ಬಟ್ಟಲು 3 ನಿಮಿಷ ಹುರಿದುಕೊಳ್ಳಬೇಕು. 
  • ಬಳಿಕ ಅಕ್ಕಿಯನ್ನು ಅಳತೆ ಮಾಡಿಕೊಂಡ ಬಟ್ಟಲಿನಲ್ಲಿ ಮುಕ್ಕಾಲು ಬಟ್ಟಲು ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ, ರುಚಿಕರವಾದ ಬಟಾಣಿ ಪಲಾವ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com