ಖರ್ಜೂರದ ಲಡ್ಡು

ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಡ್ಡು ಮಾಡುವ ವಿಧಾನ...
ಖರ್ಜೂರದ ಲಡ್ಡು
ಖರ್ಜೂರದ ಲಡ್ಡು
ಬೇಕಾಗುವ ಪದಾರ್ಥಗಳು
  • ಖರ್ಜೂರ 1 ಬಟ್ಟಲು
  • ತುಪ್ಪ - 2 ಚಮಚ
  • ಬಾದಾಮಿ - ಕತ್ತರಿಸಿದ್ದು ಸ್ವಲ್ಪ
  • ಗೋಡಂಬಿ- ಕತ್ತರಿಸಿದ್ದು ಸ್ವಲ್ಪ
  • ದ್ರಾಕ್ಷಿ - 2 ಚಮಚ
  • ತುರಿದ ಕೊಬ್ಬರಿ - ಸ್ವಲ್ಪ
  • ಗಸಗಸೆ - 1 ಚಮಚ
ಮಾಡುವ ವಿಧಾನ...
  • ಮೊದಲು ಖರ್ಜೂರವನ್ನು ತೆಗೆದುಕೊಂಡು ಬೀಜ ತೆಗೆದು ರುಬ್ಬಿಕೊಳ್ಳಬೇಕು. 
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ತುಪ್ಪವನ್ನು ಹಾಕಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಗಸಗಸೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು,
  • ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಡ್ಡು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com