ಮಿರ್ಚಿ ಫ್ರೈ

ರುಚಿಕರವಾದ ಮಿರ್ಚಿ ಫ್ರೈ ಮಾಡುವ ವಿಧಾನ...
ಮಿರ್ಚಿ ಫ್ರೈ
ಮಿರ್ಚಿ ಫ್ರೈ
ಬೇಕಾಗುವ ಪದಾರ್ಥಗಳು
  • ಹಸಿಮೆಣಸಿನ ಕಾಯಿ - 10
  • ಕಡೆಲಕಾಯಿ ಬೀಜದ ಪುಡಿ 
  • ಅಚ್ಚ ಖಾರದ ಪುಡಿ -  ಅರ್ಧ ಚಮಚ
  • ಅರಿಶಿಣದ ಪುಡಿ - ಕಾಲು ಚಮಚ
  • ದನಿಯಾ ಪುಡಿ - 1 ಚಮಚ
  • ಗರಂ ಮಸಾಲಾ - ಅರ್ಧ ಚಮಚ
  • ಜೀರಿಗೆ ಪುಡಿ- ಅರ್ಧ ಚಮಚ
  • ಮಾವಿನ ಪುಡಿ (ಆಮ್ ಚೂರ್) - 1 ಚಮಚ
  • ಸೋಂಪು ಪುಡಿ - ಅರ್ಧ ಚಮಚ
  • ಇಂಗು - ಚಿಟಿಕೆ
  • ಉಪ್ಪು - ಅರ್ಧ ಚಮಚ
  • ಎಣ್ಣೆ - 2-3 ಚಮಚ
ಮಾಡುವ ವಿಧಾನ...
  • ಮೊದಲು ಮೆಣಸಿನ ಕಾಯಿಗಳನ್ನು ತೊಳೆದು, ನಂತರ ಮಧ್ಯ ಭಾಗದಲ್ಲಿ ಕತ್ತರಿಸಿ ಬೀಜಗಳನ್ನು ತೆಗೆದಿಟ್ಟುಕೊಳ್ಳಬೇಕು. 
  • ನಂತರ ಪಾತ್ರಯೊಂದನ್ನು ತೆಗೆದುಕೊಂಡು ಅದಕ್ಕೆ, ಕಡಲೆಕಾಯಿ ಬೀಜದ ಪುಡಿ, ಅರಿಶಿನ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಇಂಗು, ಜೀರಿಗೆ ಪುಡಿ, ಸೋಂಪು ಪುಡಿ, ಉಪ್ಪು, ಗರಂ ಮಸಾಲಾ, ಆಮ್ ಚೂರ್ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ಈ ಮಿಶ್ರಣವನ್ನು ಕತ್ತರಿಸಿಕೊಂಡ ಹಸಿಮೆಣಸಿನ ಕಾಯಿ ಮಧ್ಯೆ ತುಂಬಿಟ್ಟುಕೊಳ್ಳಬೇಕು. 
  • ಪ್ಯಾನ್'ಗೆ ಎಣ್ಣೆ ಹಾಕಿ ಅದು ಕಾದ ನಂತರ ಮಸಾಲೆ ತುಂಬಿದ ಮೆಣಸಿನ ಕಾಯಿಗಳನ್ನು ಹಾಕಬೇಕು. ನಂತರ ಉಳಿದ ಪುಡಿಯನ್ನು ಇದರ ಮೇಲೆ ಹಾಕಿ 5-10 ನಿಮಿಷ ಚೆನ್ನಾಗಿ ಫ್ರೈ ಮಾಡಿದರೆ, ರುಚಿಕರವಾದ ಮಿರ್ಚಿ ಫ್ರೈ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com