ಮೊದಲಿಗೆ ರವೆಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಪಾತ್ರೆಯೊಂದಕ್ಕೆ 1 ಚಮಚ ಎಣ್ಣೆ ಹಾಕಿ. ಕಾದ ನಂತರ ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ, ಶುಂಠಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಕೊಬ್ಬರಿ ತುರಿ 2.5 ಬಟ್ಟಲು ನೀರು, ಉಪ್ಪು ಹಾಕಿ ಕುದಿಯಲು ಬಿಡಬೇಕು. ನೀರು ಕುದಿಯುತ್ತಿರುವ ವೇಳೆ ರವೆಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ, 2-3 ನಿಮಿಷ ಒಲೆಯ ಮೇಲೆ ಹಾಗೆಯೇ ಬಿಡಿ.
ಸಂಪೂರ್ಣವಾಗಿ ತಣ್ಣಗಾದ ಬಳಿಕ ಚೆನ್ನಾಗಿ ಹಿಟ್ಟಿನಂತೆ ನಾದಿಕೊಳ್ಳಬೇಕು. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಪಾತ್ರೆಯೊಂದಕ್ಕೆ ನೀರು ಹಾಕಿ ಅದರ ಮೇಲೆ ತಣ್ಣೆ ಅಥವಾ ಬಟ್ಟಲನ್ನು ಇಟ್ಟು ಈ ಉಂಡೆಗಳನ್ನು ಇಟ್ಟು ಹಬೆಯಲ್ಲಿ 10 ನಿಮಿಷ ಬೇಯಿಸಿಕೊಳ್ಳಬೇಕು.
ನಂತರ ಬಾಣೆಲೆಗೆ 3 ಚಮಚ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು, ಒಣಗಿದ ಮೆಣಸಿನ ಕಾಯಿ, ಗೋಡಂಬಿ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಉಪ್ಪು, ಅಚ್ಚ ಖಾರದ ಪುಡಿ, ಉಪ್ಪು, ಹಾಕಿ ಚೆನ್ನಾಗಿ ಹುರಿದುಕೊಂಡು ಬಳಿಕ ಹಬೆಯಲ್ಲಿ ಬೇಯಿಸಿಕೊಂಡ ಉಂಡೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ರವೆ ಬಾಲ್ಸ್ ಸವಿಯಲು ಸಿದ್ಧ.