ಪಾಲಾಕ್ ಪನ್ನೀರ್ ಪಲಾವ್

ರುಚಿಕರವಾದ ಪಾಲಾಕ್ ಪನ್ನೀರ್ ಪಲಾವ್ ಮಾಡುವ ವಿಧಾನ...
ಪಾಲಾಕ್ ಪನ್ನೀರ್ ಪಲಾವ್
ಪಾಲಾಕ್ ಪನ್ನೀರ್ ಪಲಾವ್
Updated on: 

ಬೇಕಾಗುವ ಪದಾರ್ಥಗಳು

  • ಪಾಲಾಕ್ ಸೊಪ್ಪು- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಹಸಿಮೆಣಸಿನ ಕಾಯಿ- 4-5
  • ಪನ್ನೀರ್- ಮಧ್ಯಮ ಗಾತ್ರಕ್ಕೆ ಕತ್ತರಿಸಿದ್ದು ಸ್ವಲ್ಪ
  • ಎಣ್ಣೆ, ತುಪ್ಪ- ಸ್ವಲ್ಪ
  • ಪಲಾವ್ ಎಲೆ ಮತ್ತು ಇತರೆ ಪಲಾವ್ ವಸ್ತುಗಳು- ಸ್ವಲ್ಪ
  • ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಅರಿಶಿಣ- ಸ್ವಲ್ಪ
  • ಟೊಮೆಟೋ-2 (ಸಣ್ಣಗೆ ಹೆಚ್ಚಿದ್ದು)
  • ಉಪ್ಪು-ರುಚಿಗೆ ತಕ್ಕಷ್ಟು
  • ಕ್ಯಾರೆಟ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಬಟಾಣಿ-ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಬೀನ್ಸ್- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಅಕ್ಕಿ - ಬಟ್ಟಲು

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಪಾಲಾಕ್ ಸೊಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಗೂ 1 ಚಮಚ ತುಪ್ಪ ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ  ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಟೊಮೆಟೋ, ಉಪ್ಪು, ಕ್ಯಾರೆಟ್, ಬಟಾಣಿ, ಬೀನ್ಸ್ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ತೊಳೆದು ನೆನೆಸಿಟ್ಟ ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ 1-2 ಕೂಗು ಕೂಗಿಸಿಕೊಳ್ಳಿ. ಬಳಿಕ ಎಣ್ಣೆಯಲ್ಲಿ ಪನ್ನೀರ್ ನ್ನು ಕೆಂಪಗೆ ಹುರಿದುಕೊಳ್ಳಿ. ನಂತರ ಪಲಾವ್ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಲಾಕ್ ಪನ್ನೀರ್ ಪಲಾವ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com