ಕುಂಬಳಕಾಯಿ ಸೂಪ್ - Pumpkin soup Recipe in Kannada

ರುಚಿಕರವಾದ ಕುಂಬಳಕಾಯಿ ಸೂಪ್ ಮಾಡುವ ವಿಧಾನ...
ಕುಂಬಳಕಾಯಿ ಸೂಪ್
ಕುಂಬಳಕಾಯಿ ಸೂಪ್
Updated on: 

ಬೇಕಾಗುವ ಪದಾರ್ಥಗಳು...

  • ಕುಂಬಳಕಾಯಿ - ಮೂರು ಬಟ್ಟಲು (ಕತ್ತರಿಸಿದ್ದು)

  • ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)

  • ಆಲೂಗಡ್ಡೆ- ಎರಡು

  • ಬೆಣ್ಣೆ- ಒಂದು ಚಮಚ

  • ಕಾಳುಮೆಣಸಿನ ಪುಡಿ - 1 ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ.ಅದಕ್ಕೆ ಕತ್ತರಿಸಿ ಆಲೂಗಡ್ಡೆ ಹಾಗೂ ಕುಂಬಳಕಾಯಿ ಹೋಳುಗಳನ್ನು ಹಾಕಿ.

  • ಒಂದು ಲೋಟ ನೀರು ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ.ಹೋಳುಗಳು ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

  • ರುಬ್ಬಿದ ಮಿಶ್ರಣವನ್ನು ಮತ್ತೆ ಬಿಸಿ ಮಾಡಿ. ಬಿಸಿ ಮಾಡುವಾಗ ಕಾಳುಮೆಣಸಿನ ಪುಡಿ ಹಾಕಿ. ನಂತರ ಗಾರ್ಲಿಕ್ ಬ್ರೆಡ್ ಜೊತೆ ಸರ್ವ್ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com