ಮಸಾಲಾ ಓಟ್ಸ್ | Masala oats recipe in Kannada

ರುಚಿಕರವಾದ ಮಸಾಲಾ ಓಟ್ಸ್ ಮಾಡುವ ವಿಧಾನ...
Masala oats
ಮಸಾಲಾ ಓಟ್ಸ್
Updated on: 

ಬೇಕಾಗುವ ಪದಾರ್ಥಗಳು...

  • ಓಟ್ಸ್ – 1 ಬಟ್ಟಲು

  • ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)

  • ಟೊಮ್ಯಾಟೊ – 1

  • ಕ್ಯಾರೆಟ್ – 1/4 ಬಟ್ಟಲು

  • ಬೀನ್ಸ್ – 1/4 ಬಟ್ಟಲು

  • ಬಟಾಣಿ – 1/4 ಬಟ್ಟಲು

  • ಹಸಿಮೆಣಸಿನಕಾಯಿ – 2

  • ಶುಂಠಿ – 1 ಚಿಕ್ಕ ತುಂಡು

  • ಸಾಸಿವೆ – 1/2 ಚಮಚ

  • ಜೀರಿಗೆ – 1/2 ಚಮಚ

  • ಕರಿಬೇವು – ಸ್ವಲ್ಪ

  • ಅರಿಶಿನ – 1/4 ಚಮಚ

  • ಕೆಂಪು ಮೆಣಸಿನ ಪುಡಿ – 1/2 ಚಮಚ

  • ಗರಂ ಮಸಾಲಾ – 1/4 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ ಅಥವಾ ತುಪ್ಪ – 2 ಚಮಚ

  • ನೀರು – 1½ ಬಟ್ಟಲು

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ನಿಂಬೆರಸ – 1 ಚಮಚ

ಮಾಡುವ ವಿಧಾನ...

  • ಮೊದಲು ಪ್ಯಾನ್‌ನಲ್ಲಿ ಓಟ್ಸ್ ಅನ್ನು 2 ನಿಮಿಷ ಸ್ವಲ್ಪ ಹುರಿದು ತೆಗೆದು ಇಡಿ.

  • ಅದೇ ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿರಿ.

  • ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ. ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

  • ಈಗ ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ 3–4 ನಿಮಿಷ ಬೇಯಿಸಿ. ಬಳಿಕ ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಕಲಸಿ.

  • ನೀರು ಸೇರಿಸಿ ಕುದಿಯಲು ಬಿಡಿ. ನಂತರ ಹುರಿದ ಓಟ್ಸ್ ಸೇರಿಸಿ ನಿಧಾನ ಉರಿಯಲ್ಲಿ 4–5 ನಿಮಿಷ ಬೇಯಿಸಿ.

  • ಓಟ್ಸ್ ಗಟ್ಟಿಯಾಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿ. ಇದೀಗ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com