

'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಕವಿವಾಣಿಯಂತೆ ಇಂದಿನ ವೇಗದ ಜಮಾನದಲ್ಲಿ ಎಲ್ಲವೂ ನಮ್ಮೊಳಗೇ ಇದ್ದು ಅದನ್ನು ಬಳಸಿಕೊಳ್ಳದೆ ಒತ್ತಡ, ಬೇಸರ ಕಳೆಯಲು ಮತ್ತಾವುದೋ ದಾರಿ ಹುಡುಕಿಕೊಂಡು ಸಾಗುವುದನ್ನೇ ಜೀವನ ಎಂದುಕೊಂಡಿದ್ದೇವೆ.
ಒತ್ತಡ ಮುಕ್ತರಾಗಿ ಖುಷಿ ಪಡಲು ನಮ್ಮೊಳಗೆ ನೂರಾರು ದಾರಿಗಳಿವೆ. ಆದರೂ ದೂರದಲ್ಲೆಲ್ಲೋ ಇರುವ ಫೇಸ್‌ಬುಕ್ ಗೆಳೆಯ, ಜೀವವಿಲ್ಲದ ಮೊಬೈಲ್, ಇಂಟರ್‌ನೆಟ್, ಕುಡಿತ, ಸಿಗರೇಟು ಮತ್ತಿತರ ಕ್ಷಣಿಕ ಸುಖಗಳ ಬೆನ್ನತ್ತಿ ಗುರಿಯಿಲ್ಲದ ದಾರಿಯಲ್ಲಿ ನಡೆಯುತ್ತಿದ್ದೇವೆ.
ಆದರೆ, ನಮ್ಮ ನಿತ್ಯ ಜೀವನದ ಜಂಜಾಟದ ನಡುವೆಯೂ ಜೀವನ ಶೈಲಿಯಲ್ಲಿ ಕೆಲವೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ಸಣ್ಣ ಸಣ್ಣ ಸಂಗತಿಗಳೇ ನಮ್ಮನ್ನು ಪ್ರತಿ ದಿನ, ಪ್ರತಿ ಕ್ಷಣವೂ ಆಹ್ಲಾದಕರವಾಗಿ ಇರಿಸುತ್ತವೆ.
ಸುಮ್ಮನೆ ಟ್ರೈ ಮಾಡಿ...