

ಅವನೀಗ ಪುರುಷ. ಪುರುಷತ್ವ ಕರಗಿದ ಪುರುಷ. ಇಂದಿನ ಬಹುತೇಕ ಬಂಜೆ ಪ್ರಕರಣಗಳ ಮುಖ್ಯ ಕಾರಣಗಳಲ್ಲಿ ವಿರ್ಯಾಣುಗಳ ಕೊರತೆ ಒಂದೆಂಬುದು ತಜ್ಞರು ಸಾಬೀತುಪಡಿಸಿದ ಸಂಗತಿ...
ಅವಳು ಫಸಲು ಹುಟ್ಟದ ಮಡಿಲು. ಒಂದಿಷ್ಟು ಕನಸುಗಳಿಗೆ ಜನನ ಕೊಡಬಲ್ಲಳು ಬಿಟ್ಟರೆ, ಕಂದಮ್ಮಗಳಿಗಲ್ಲ. ತಲೆ ಎತ್ತಿ ನಡೆಯುವುದನ್ನೇ ಮರೆತುಬಿಟ್ಟಿದ್ದಾಳೆ. ಹೆರುವುದಕ್ಕೆ ಅಸಮರ್ಥಳೆಂಬ ಎಲ್ಲರ ಕೂಗು ಅವಳ ಕಿವಿಯನ್ನು ತಲುಪುತ್ತಿವೆ. 'ಬಂಜೆ' ಎಂಬುದೇನು ಅವಳಿಗೆ ಪಟ್ಟವಲ್ಲ. ಆಕಸ್ಮಿಕವಾಗಿ ಬಿದ್ದ ಪೆಟ್ಟು. ಕೆಲವು ಕಾರ್ಯಕ್ರಮಗಳಲ್ಲಿ ಅವಳಿಗೆ ಪ್ರವೇಶ ನಿಷಿದ್ಧ. ಡೈವೋರ್ಸ್ ಪೇಪರ್ಗೆ ಗಂಡನ ಸಹಿಯೊಂದು ಬಿದ್ದರೆ ಸಾಕಷ್ಟೇ...
ಬಿಡಿ, ಅದು ಹೆಣ್ಣಿನ ಸ್ಥಿತಿ. ಇನ್ನು ಗಂಡಿನ ಗೋಳು ಗೊತ್ತಾ? ಅವನೀಗ ಪುರುಷ. ಪುರುಷತ್ವ ಕರಗಿದ ಪುರುಷ. ಇಂದಿನ ಬಹುತೇಕ ಬಂಜೆ ಪ್ರಕರಣಗಳ ಮುಖ್ಯ ಕಾರಣಗಳಲ್ಲಿ ವಿರ್ಯಾಣುಗಳ ಕೊರತೆ ಒಂದೆಂಬುದು ತಜ್ಞರು ಸಾಬೀತುಪಡಿಸಿದ ಸಂಗತಿ.
ತಡವಾಗಿ ಸಪ್ತಪದಿ ತುಳಿಯುವುದು, ಆಹಾರ ಶೈಲಿ, ನೀರು, ಕೆಲಸ ಮಾಡೋ ಬಗೆ... ಹೀಗೆ ನಾನಾ ಕಾರಣಗಳಿಂದ ಗಂಡಿನಲ್ಲಿ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ದಶಕದ ಹಿಂದೆ ಪ್ರತಿಯೊಂದು ಮಿಲಿಲೀಟರ್ನಲ್ಲಿ 40-50 ದಶಲಕ್ಷ ವೀರ್ಯಾಣು ಇದ್ರೆ ನಾರ್ಮಲ್ ಎಂದು ಪರಿಗಣಿಸುತ್ತಿದ್ದರು. ಈಗ ವಿಶ್ವ ಆರೋಗ್ಯ ಸಂಸ್ಥೆ ಕೇವಲ 20 ದಶಲಕ್ಷ ವೀರ್ಯ ಇದ್ದರೆ ನಾರ್ಮಲ್ ಎಂದು ಹೇಳುವಷ್ಟರ ಮಟ್ಟಿಗೆ ಬಂದಿದೆ. ಅಂದರೆ, ಪುರುಷರಲ್ಲಿ ವೀರ್ಯಾಣುಗಳು ಇದ್ದರೆ ಸಾಕು ಎಂಬಂಥ ದುಃಸ್ಥಿತಿ. ಭಾರತದಲ್ಲಿ 12-18 ದಶಲಕ್ಷ ದಂಪತಿ ಮಕ್ಕಳಾಗದ ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಮಸ್ಯೆ ಕಾಡುತ್ತಿರುವುದು ಗಂಡಿನಲ್ಲಿರುವ ದೌರ್ಬಲ್ಯಗಳಿಂದ.
ಗಂಡು ಹೆಣ್ಣು ಕೂಡಿದಾಗ ಬಿಡುಗಡೆಯಾಗುವ ವೀರ್ಯಾಣುಗಳು ಹೆಣ್ಣಿನ ಗರ್ಭನಾಳದೊಳಗೆ ನುಗ್ಗಿ ಅಂಡಾಣುವಿನೊಂದಿಗೆ ಕೂಡಬೇಕು. ಆಗ ಗರ್ಭ ಕಟ್ಟುತ್ತದೆ. ಆದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಅದು ವೇಗವಾಗಿ ಆಗಿ ಚಲಿಸದೆ ಅಂಡಾಣುವಿನೊಂದಿಗೆ ಸೇರೋದೇ ಇಲ್ಲ. ಒಂದು ವರ್ಷದವರೆಗೂ ಯಾವುದೇ ಸಂತಾನ ನಿಯಂತ್ರಣ ಕ್ರಮಗಳನ್ನೂ ಅನುಸರಿಸದೆಯೂ, ವರ್ಷದವರೆಗೂ ಸಮರ್ಥ ಲೈಂಗಿಕ ಕ್ರಿಯೆ ನಡೆದರೂ ಕನ್ಸೀವ್ ಆಗ್ಲಿಲ್ಲ ಎಂದರೆ ಏನೋ ಪ್ರಾಬ್ಲಂ ಇದೆ ಅಂತಲೇ ಅರ್ಥ.
ಕಾಡುವ ಸಮಸ್ಯೆಗಳೇನು?
ವೀರ್ಯಾಣವಿನ ನಿಧಾನಗತಿಯ ಚಲನೆ ಅತವಾ ಕಮ್ಮಿಯಾಗಿರೋದು, ಬಾಲ್ಯದಲ್ಲಿಯೇ ಹರ್ನಿಯಾದಂಥ ಚಿಕಿತ್ಸೆಗೆ ಒಳಗಾಗಿದ್ದರೆ ಟೆಸ್ಟಿಸ್ಗೆ ಏಟು ಬಿದ್ದು ವಯಸ್ಕನಾಗುತ್ತಿದ್ದಂತೆ ವೀರ್ಯಾಣುಗಳ ಚಲನೆಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಹಾರ್ಮೋನ್ ರೋಗಗಳು, ಹೊಟ್ಟೆ ಹುಣ್ಣು ಅಥವಾ ಇತರೆ ಸಮಸ್ಯೆಗಳಿಗೆ ದೀರ್ಘಕಾಲದವರೆಗೂ ತೆಗೆದುಕೊಳ್ಳುವ ಅಸ್ಪರಿನ್ ಹಾಗೂ ಸ್ಟೆರಾಯ್ಡ್ ಅಂಶಗಳಿರುವ ಔಷಧಿಗಳು ತೆಗೆದುಕೊಂಡರೂ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಮಧುಮೇಹದಂಥ ಸಮಸ್ಯೆಗಳಿದ್ದಲ್ಲಿ ವೀರ್ಯಾಣುಗಳು ಒಣಗಿದಂತಾಗಿ ಚಲನೆ ನಿಧಾನವಾಗಬಲ್ಲದು. ಸಿಗರೇಟ್ ಸೇವನೆ ಅಥವಾ ಹೊಗೆಸೊಪ್ಪಿನ ಅಂಶವುಳ್ಳ ಯಾವುದಾದರೂ ವಸ್ತುಗಳ ಸೇವನೆ, ಕುಡಿತವೂ ವೀರ್ಯಾಣುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.
ಪಕ್ವ ವೀರ್ಯಾಣು ಹೇಗಿರುತ್ತೆ?
ಒಂದು ಪಕ್ವತೆ ಹೊಂದಿರುವ ವೀರ್ಯಾಣು ಟೋಪಿ ಹಾಕಿಕೊಂಡ ತಲೆ, ಕತ್ತು ಹಾಗೂ ಬಾಲವನ್ನು ಹೊಂದಿರುತ್ತದೆ. ಸುಮಾರು 55 ಮೈಕ್ರಾನ್ಸ್ ಉದ್ದವಿರುವ ವೀರ್ಯಾಣುವಿನ ತಲೆ 3- 6 ಮೈಕ್ರಾನ್, ಕುತ್ತಿಗೆ 8 ಹಾಗೂ ಬಾಲ 45 ಮೈಕ್ರಾನ್ನಷ್ಟು ಉದ್ದವಿರುತ್ತದೆ. ಒಂದು ಮೈಕ್ರಾನ್ ಎಂದರೆ ಮೀಟರ್ವೊಂದರ ದಶಲಕ್ಷಾಂಶದಷ್ಟು ಉದ್ದ.
ವೀರ ವೀರ್ಯಾಣುಗಳು ಮುಖ್ಯ
ಸಮಸ್ಯೆಗಳು ಏನಾದ್ರೂ ಆಗಲಿ. ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ಸ್ಪರ್ಮ್ (ವೀರ್ಯಾಣು) ಕೌಂಟ್ ಕಡಿಮೆ ಎಂದ ಕೂಡಲೇ ಪುರಷತ್ವದ ಬಗ್ಗೆಯೇ ಆತಂಕ ಪಡೋದು ಬೇಡ. ಅವಕ್ಕೂ ಪರಿಹಾರ ಇದ್ದೇ ಇರುತ್ತದೆ.
ನೀವು ತೆಗೆದುಕೊಳ್ಳುವ ಔಷಧಿಗಳು ವೀರ್ಯಾಣುಗಳ ಉತ್ಪತ್ತಿ ಹಾಗೂ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ. ವಿಶೇಷವಾಗಿ ಕೂದಲು ಹುಟ್ಟುತ್ತೆ, ತೆಳ್ಳಗಿದ್ದರೆ ದಪ್ಪಗೆ ಆಗ್ತಾರೆ ಅಥವಾ ಉಲ್ಟಾ ಪರಿಣಾಮ ಬೀರುವ ಔಷಧಿಗಳು ನೇರವಾಗಿಯೇ ಸ್ಪರ್ಮ್ ಕೌಂಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರ ಅಗತ್ಯ.
ವೀರ್ಯವಂತರಾಗೋದು ಹೇಗೆ?