700 ಔಷಧ ನಿಷೇಧ

ವೈದ್ಯಕೀಯ ಪರೀಕ್ಷೆಗಳನ್ನು ಸಮರ್ಪಕ ವಾಗಿ ನಡೆಸಿಲ್ಲ. ಈ ವರದಿಗಳಲ್ಲಿ ದೋಷಿವಿದೆ ಎಂದು ಭಾರತದ ಔಷಧ ತಯಾರಿಕಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬರ್ಲಿನ್: ವೈದ್ಯಕೀಯ ಪರೀಕ್ಷೆಗಳನ್ನು ಸಮರ್ಪಕ ವಾಗಿ ನಡೆಸಿಲ್ಲ. ಈ ವರದಿಗಳಲ್ಲಿ ದೋಷಿವಿದೆ ಎಂದು ಭಾರತದ ಔಷಧ ತಯಾರಿಕಾ ಕಂಪನಿ ಜಿವಿಕೆ ತಯಾರಿಸಿರುವ 700 ಔಷಧಿಗಳನ್ನು ಐರೋಪ್ಯ ಒಕ್ಕೂಟ ನಿಷೇಧಿಸಿದೆ.

ಇದು ಭಾರತೀಯ ಔಷಧ ಕಂಪನಿಯೊಂದಕ್ಕೆ ಆಗಿರುವ ಅತಿದೊಡ್ಡ ಹಿನ್ನಡೆಯಾಗಿದೆ. ಯೂರೋಪ್ ಆಯೋಗ ಈ ಕುರಿತು ಆದೇಶ ಹೊರಡಿಸಿದ್ದು ಆಗಸ್ಟ್ 21ರಿಂದ ಕಾರ್ಯರೂಪಕ್ಕೆ ಬರಲಿದೆ. ಐರೋಪ್ಯ ಒಕ್ಕೂಟದ ಎಲ್ಲ 28 ದೇಶಗಳು ಈ ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಲಿವೆ.

ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಪ್ರಾಧಿಕಾರವಾದ ಯೂರೋಪಿಯನ್ ಮೆಡಿಸಿನ್ ಏಜೆನ್ಸಿ (ಇಎಂಎ) ಶಿಫಾರಸಿನ ಮೇರೆಗೆ ಆಂಯೋಗ ಈ ಕ್ರಮ ಕೈಗೊಂಡಿದೆ. ಜಿವಿಕೆ ಹೈದರಾಬಾದ್ ಮೂಲದ ಕಂಪನಿಯಾಗಿದ್ದು ಇದು ತಯಾರಿಸಿದ ಔಷಧಿಗಳ ಫಲದಾಯಕತೆ ಮತ್ತು ಪರಿಣಾಮದ ಕುರಿತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿರುವ ಕುರಿತ ವರದಿಗಳನ್ನು ತನ್ನ ಅನುಕೂಲಕ್ಕೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಇಎಂಎ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com