ಪುತ್ರಿಯರ ವಿವಾಹಕ್ಕೆ ದಕ್ಷಿಣ ಭಾರತದ ಪೋಷಕರು ಒತ್ತಡ ಹೇರುವುದು ಕಡಿಮೆ: ಅಧ್ಯಯನ ವರದಿ

ಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಯುವತಿಯರಿಗೆ ಮದುವೆಯ ವಿಚಾರದಲ್ಲಿ ಪೋಷಕರ ಒತ್ತಡ ಕಡಿಮೆಯಾಗುತ್ತಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚೆನ್ನೈ: ಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಯುವತಿಯರಿಗೆ ಮದುವೆಯ ವಿಚಾರದಲ್ಲಿ ಪೋಷಕರ ಒತ್ತಡ ಕಡಿಮೆಯಾಗುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ದಕ್ಷಿಣ ಭಾರತ ಮತ್ತು ಒಡಿಶಾದಲ್ಲಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 
ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಕ್ಕಳು ಹೆಚ್ಚು ಸಾಧಿಸುವಂತೆ  ಪೋಷಕರು ಒತ್ತಡ ಹೇರುವುದು ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಜೂನ್ 18ರಿಂದ 22ರವರೆಗೆ 4 ದಿನಗಳ ಕಾಲ ಈ ಅಧ್ಯಯನ ನಡೆಸಲಾಗಿದ್ದು, ಶೇಕಡಾ 12.23 ಮಂದಿ ಯುವತಿಯರು ತಮಗೆ ಮದುವೆ ವಿಚಾರದಲ್ಲಿ ಪೋಷಕರ ಒತ್ತಡ ಕಡಿಮೆ ಎಂದು ಹೇಳಿದ್ದಾರೆ. ಚೆನ್ನೈಯಲ್ಲಿ ಮಾತ್ರ ಹುಡುಗಿಯರಿಗೆ ಶಿಕ್ಷಣ ಅಥವಾ ಉದ್ಯೋಗ ಪಡೆಯುವುದಕ್ಕಿಂತ ಮದುವೆ ಮಾಡಿಸಲು ಪೋಷಕರು ಒತ್ತಡ ಹೇರುವುದು ಹೆಚ್ಚು ಎಂದು ತಿಳಿದುಬಂದಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ಶಿಕ್ಷಿತರನ್ನು ಹೊಂದಿರುವ ಕೇರಳ ರಾಜ್ಯದಲ್ಲಿ ಕೂಡ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಆದಷ್ಟು ಬೇಗನೆ ಮದುವೆ ಮಾಡಿಕೊಡಲು ಬಯಸುತ್ತಾರಂತೆ. ಆದರೆ ಒಡಿಶಾ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಬೇಗನೆ ಮದುವೆ ಮಾಡಿಸಬೇಕೆಂದು ಒತ್ತಡ ಹೇರುವ ಪೋಷಕರು ಕಡಿಮೆಯಂತೆ. ಇನ್ನು ದಕ್ಷಿಣ ಭಾರತದ ಮೆಟ್ರೊಪಾಲಿಟನ್ ನಗರಗಳಲ್ಲಿ ಪ್ರಮುಖವಾದ ಬೆಂಗಳೂರಿನಲ್ಲಿ ಪರಿಸ್ಥಿತಿ ಸಾಧಾರಣವಾಗಿದೆ. ಹೈದರಾಬಾದಿನಲ್ಲಿ ಹುಡುಗಿಯರಿಗಿಂತ ಹುಡುಗರು ಬೇಗನೆ ಮದುವೆಯಾಗಲು ಪೋಷಕರು ಒತ್ತಡ ಹೇರುತ್ತಾರಂತೆ.
ಮದುವೆ ಕುರಿತ ಆಲೋಚನೆಗಳು ಬದಲಾಗುತ್ತಿವೆ. ಜೀವನದಲ್ಲಿ ಮದುವೆ ಅತ್ಯಂತ ಪ್ರಮುಖ ಎಂಬ ಆಲೋಚನೆಗಳು ಬದಲಾಗುತ್ತಿದೆ ಎನ್ನುತ್ತಾರೆ ಬೆಂಗಳೂರು ಮೂಲದ ಪೋಷಕ ಸತಾಂತಿ ಆಲ್ಫ್ರೆಡ್. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಮದುವೆ ವಿಷಯದಲ್ಲಿ ಪೋಷಕರು ಹೆಚ್ಚು ಒತ್ತಡ ಹೇರಿದರೆ ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ ಎನ್ನುತ್ತಾರೆ ವೆಂಕಟೇಶ್ ರಾಮಚಂದ್ರನ್, ಚೆನ್ನೈ ಮೂಲದ ಸಲಹಾ ಮನಃ ಶಾಸ್ತ್ರಜ್ಞ.
'' ಕೆಲವು ಪೋಷಕರು ತಮ್ಮ ಮಕ್ಕಳನ್ನು ಐಐಟಿ ಕೋಚಿಂಗ್ ಗೆಂದು 6ನೇ ತರಗತಿಯಿಂದಲೇ ದಾಖಲಿಸುತ್ತಾರೆ. ಇದು ತೀರಾ ಅಪಹಾಸ್ಯವೆನಿಸುತ್ತದೆ. ಜೀವನದ ಪ್ರಮುಖ ನಿರ್ಧಾರಗಳ ವಿಷಯದಲ್ಲಿ ವ್ಯಕ್ತಿಯ ತೀರ್ಮಾನಕ್ಕೆ ಬಿಡುವುದು ಒಳ್ಳೆಯದು ಎನ್ನುತ್ತಾರೆ ವೆಂಕಟೇಶ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com