ಹೊರನಾಡು ಕನ್ನಡಿಗ

ಪ್ರೀತಿ ಒಂದೇ ಸಕಲ ಸಮಸ್ಯೆಗೆ ಪರಿಹಾರ

Published On :

ಮುಂಬಯಿ: ಸ್ತ್ರೀ, ಪುರುಷರನ್ನು ಪರಿಪೂರ್ಣತೆಗೆ ಒಯ್ಯಲಿದ್ದಾಳೆ. ಸ್ತ್ರೀ ತನ್ನಷ್ಟಕ್ಕೆ ತಾನು ಪರಿಪೂರ್ಣಳಾಗಿದ್ದಾಳೆ. ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಎರಡರ ಸುಂದರತೆಯನ್ನು ಒಪ್ಪಿಕೊಂಡು ಮುಂದೆ ಸಾಗಬೇಕೆಂದು ಸ್ತ್ರೀ ಚಿಂತಕಿ ಡಾ.ವೀಣಾ ಬನ್ನಂಜೆ ನುಡಿದರು.
ಕರ್ನಾಟಕ ಸಂಘ ಮುಂಬಯಿ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ  'ಮಹಿಳೆ ಮತ್ತು ಸಂಸ್ಕೃತಿ ಸಮಾವೇಶ'ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯು ಎಲ್ಲ ಒಳಗೊಂಡಿದೆ. ಅದರಲ್ಲಿ ಆಳ ಇದೆ. ಹಾಗಿದ್ರೂ ನಮ್ಮ ಮಣ್ಣಿನ ಒಟ್ಟು ಮೂಲ ಇರುವುದೇ ಭೇದ ಹುಡುಕುವುದರಲ್ಲೇ ವ್ಯರ್ಥವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾವೇಶ ಉದ್ಘಾಟಿಸಿದ ವಿಮರ್ಶಕ ಪ್ರೊ. ಎಸ್.ಆರ್. ವಿಜಯಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರೊ. ಎಸ್.ಆರ್. ವಿಜಯಶಂಕರ್‌ಗೆ 'ಡಾ. ಸುನೀತಾ ಎಂ. ಶೆಟ್ಟಿ ಸಾಹಿತ್ಯ ಪ್ರಶಸ್ತಿ'ಯನ್ನು ವೇದಿಕೆಯಲ್ಲಿದ್ದ ಗಣ್ಯರು ಪ್ರದಾನ ಮಾಡಿದರು.
ಕರ್ನಾಟಕದ ಖ್ಯಾತ ಗಾಯಕ ರಾಮಚಂದ್ರ ಹಡಪದ ಬಳಗದವರಿಂದ ಕಾವ್ಯ ಗಾಯನ, ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸಾಕ್ಷ್ಯಚಿತ್ರ ಹಾಗೂ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಬೆಂಗಳೂರು ಇವರಿಂದ ಡಾ.ಎಂ. ಭೈರೇಗೌಡ ರಚಿತ ರಾಮಕೃಷ್ಣ ಬೆಳ್ತೂರು ಇವರ ನಿರ್ದೇಶನದಲ್ಲಿ 'ಕಿನ್ನುಡಿಯ ಬೆಳಕಲ್ಲಿ' ನಾಟಕ ಪ್ರದರ್ಶಿಸಲ್ಪಟ್ಟಿತ್ತು.
ಸಮಾರೋಪ ಕಾರ್ಯಕ್ರಮ: ನಮ್ಮನ್ನು ಕಾಯುವುದು ಅಂತರಂಗದ ಶಿಸ್ತು. ಅಲ್ಲಿ ಪ್ರೀತಿ ಒಂದೇ ಸಕಲ ಸಮಸ್ಯೆಗೂ ಪರಿಹಾರವಾಗಿದೆ. ಸಂಯಮ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ನೋಡುವ ಕಣ್ಣುಗಳು ಬದಲಾಗಬೇಕಾಗಿದೆ. ಬದುಕು ನಮಗೆ ಪ್ರಾಮಾಣಿಕವಾಗಿರಬೇಕಾಗಿದೆ ಎಂದು ಸ್ತ್ರೀ ಚಿಂತಕಿ, ಲೇಖಕಿ ಡಾ.ವೀಣಾ ಬನ್ನಂಜೆ ಹೇಳಿದ್ದಾರೆ.ಕರ್ನಾಟಕ ಸಂಘ ಮುಂಬಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಿಂದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ 8ನೇ ಸಾಹಿತ್ಯ-ಸಂಸ್ಕೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ದೇವಪಥದಲ್ಲಿ ಹೆಣ್ಣು-ಗಂಡು ಇಬ್ಬರೂ ಸಮಾನರು. ಸ್ವೇಚ್ಛಾಚಾರಕ್ಕೆ ಒಲಿದು ಮಾಡುವ ಅತ್ಯಾಚಾರಿಗಳ ವಿರುದ್ಧ ತೀವ್ರವಾಗಿ ಖಂಡಿಸಿದ ಅವರು, ಇಂತಹ ಪ್ರಸಂಗದಲ್ಲಿ ನಮ್ಮ ವಕೀಲರು ಅಪರಾಧಿಗಳ ಪರವಾಗಿ ಕಾಸು ಪಡೆದು ವಾದ ಮಾಡಲು ಮುಂದಾಗಿರುವುದು ಅತ್ಯಂತ ನಾಚಿಕೆ ಸಂಗತಿ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಿಯತಮ, ಪ್ರಕಾಶ್ ಜಿ. ಬುರ್ಡೆ, ಅರುಣ್‌ಕುಮಾರ್ ಅವರಿಗೆ ವೇದಿಕೆಯ ಗಣ್ಯರು ಸನ್ಮಾನಿಸಿ ಹತ್ತು ಸಾವಿರ ನಗದು ನೀಡಿ ಸಾಧನಾ ಶಿಖರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಗೌರವಾರ್ಪಣೆ ನೀಡಲಾಯಿತು.
ಮುಂಬಯಿ ಕರ್ನಾಟಕ ಸಂಘದ ಅಧ್ಯಕ್ಷ ಜಿ.ಡಿ. ಜೋಶಿ ಮಾತನಾಡಿದರು. ವಿವಿಧ ಗೋಷ್ಠಿಗಳು ಜರುಗಿದವು. ಅಭಿಲಾಷಾ ಉಡುಪಿ, ಡಾ.ಬಿ.ಎಂ. ಪುಟ್ಟಯ್ಯ, ಡಾ.ಶೈಲಜಾ ಹಿರೇಮಠ, ಅಮಿತಾ ಭಾಗವತ್ ಪ್ರಬಂಧ ಮಂಡಿಸಿದರು. ಸಮಾರೋಪ ಭಾಷಣವನ್ನು ಡಾ.ಟಿ.ಆರ್. ಚಂದ್ರಶೇಖರ್ ಮಾಡಿದರು. ಗೌ. ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಗೌ. ಕಾರ್ಯದರ್ಶಿ ಡಾ. ಭರತ್‌ಕುಮಾರ್ ಪೊಲಿಪು ನಿರೂಪಿಸಿ ವಂದಿಸಿದರು. ದೃಶ್ಯ ಬೆಂಗಳೂರು ಇವರಿಂದ ಮೋಹನಚಂದ್ರ ರಚನೆಯ ದಾಕ್ಷಾಯಿಣಿ ಭಟ್ ನಿರ್ದೇಶನದ ಬಸ್ತಿ ನಾಟಕ ಪ್ರದರ್ಶಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.