ಈಜಿಪ್ಟ್, ಟರ್ಕಿಯಂತೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ ಭಾರತ: ಜೋಸೆಫ್ ಯುಜೀನ್

ಎನ್ ಜಿಒ ಹಾಗೂ ವಿಶ್ವವಿದ್ಯಾಲಯದ ವಿರುದ್ಧ ನಿಂತು ಕಿರುಕುಳ ನೀಡುತ್ತಿರುವ ಈಜಿಪ್ಟ್, ಟರ್ಕಿ ಹಾಗೂ ರಷ್ಯಾದಂತೆ ವರ್ತಿಸುತ್ತಿದೆ ಭಾರತ ಎಂದು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ...
ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ ಅರ್ಥಶಾಸ್ತ್ರಜ್ಞ ಜೋಸೆಫ್ ಯುಜೀನ್ ಸ್ಟಿಗ್ಲಿಟ್ಜ್ (ಸಂಗ್ರಹ ಚಿತ್ರ)
ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ ಅರ್ಥಶಾಸ್ತ್ರಜ್ಞ ಜೋಸೆಫ್ ಯುಜೀನ್ ಸ್ಟಿಗ್ಲಿಟ್ಜ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಎನ್ ಜಿಒ ಹಾಗೂ ವಿಶ್ವವಿದ್ಯಾಲಯದ ವಿರುದ್ಧ ನಿಂತು ಕಿರುಕುಳ ನೀಡುತ್ತಿರುವ ಈಜಿಪ್ಟ್, ಟರ್ಕಿ ಹಾಗೂ ರಷ್ಯಾದಂತೆ ವರ್ತಿಸುತ್ತಿದೆ ಭಾರತ ಎಂದು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ ಅರ್ಥಶಾಸ್ತ್ರಜ್ಞ ಜೋಸೆಫ್ ಯುಜೀನ್ ಸ್ಟಿಗ್ಲಿಟ್ಜ್ ಅವರು ಹೇಳಿದ್ದಾರೆ.

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಆಯೋಜಿಸಿದ್ದ 'ಜಾಗತಿಕ ಅಸಮಾನತೆ: ಕಾರಣಗಳು ಮತ್ತು ಪರಿಣಾಮ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಜೋಸೆಫ್ ಯುಜೀನ್ ಅವರು, ಪ್ರಸ್ತುತ ಭಾರತ ಸರ್ಕಾರ ಎನ್ ಜಿಒ ಹಾಗೂ ವಿಶ್ವವಿದ್ಯಾಲಯ ವಿರುದ್ಧ ನಿಂತು ಕಿರುಕುಳ ನೀಡುತ್ತಿರುವ ಈಜಿಪ್ಟ್, ಟರ್ಕಿ ಹಾಗೂ ರಷ್ಯಾದಂತೆ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮೋದಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಬೇರಾವುದೇ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳದ ಕ್ರಮಗಳನ್ನು ನಮ್ಮ ಭಾರತದ ವಿಶ್ವವಿದ್ಯಾಲಯಗಳ ಮೇಲೆ ಕೈಗೊಳ್ಳಲಾಗುತ್ತಿದೆ. ಇಂತಹ ಕ್ರಮಗಳು ಭಾರತವನ್ನು ಚಿಕ್ಕ ಕಂಪನಿಗಳಾಗಿ ಮಾಡುತ್ತಿದೆ. ಇಂತಹ ಕ್ರಮಗಳು ವಿದೇಶಿ ಬಂಡವಾಳ ಹೂಡಿಕೆದಾರರನ್ನು ದೇಶದಿಂದ ದೂರ ಉಳಿಯುವಂತೆ ಮಾಡಲಿದೆ ಎಂದು ಹೇಳಿದ್ದಾರೆ.

ವೇತನ ಭದ್ರತೆ ಮೇಲೆ ಹೇರುತ್ತಿರುವ ಕೆಟ್ಟ ನೀತಿಗಳು ಮಾರುಕಟ್ಟೆ ಆರ್ಥಿಕತೆ ಮೇಲೆ ಅಸಮತೋಲವನ್ನುಂಟು ಮಾಡುತ್ತಿದೆ. ಮಾರುಕಟ್ಟೆ ಆರ್ಥಿಕತೆಯಿಂದಾಗಿ ನಮ್ಮ ದೇಶ ವೈಫಲ್ಯ ಕಾಣುತಿದ್ದು, ಇಂತಹ ಬೆಳವಣಿಗೆಗಳು ಇತರೆ ದೇಶಗಳಲೆಲ್ಲೂ ಕಂಡು ಬಂದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com