'ನನ್ನ ಕಾರು ಕದ್ದು ಬೇರೆಯವರಿಗೆ ನೀಡಿದ್ದಳು': ಪತ್ನಿ ಆರೋಪಕ್ಕೆ ದರ್ಶನ್ ಕೊಟ್ಟ ಪ್ರತಿಕ್ರಿಯೆ

ತಮ್ಮ ವಿರುದ್ಧ ಪತ್ನಿ ವಿಜಯಲಕ್ಷ್ಮೀ ಮತ್ತೆ ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ನಟ ದರ್ಶನ್...
ದರ್ಶನ್
ದರ್ಶನ್
ಬೆಂಗಳೂರು: ತಮ್ಮ ವಿರುದ್ಧ ಪತ್ನಿ ವಿಜಯಲಕ್ಷ್ಮೀ ಮತ್ತೆ ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ನಟ ದರ್ಶನ್, ನನ್ನ ಪತ್ನಿ ಆಡಿ ಕಾರನ್ನು ತನ್ನ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದಳು ಎಂದು ಆರೋಪಿಸಿದ್ದಾರೆ.
ನನ್ನ ಆಡಿ ಕಾರನ್ನು ವಿಜಯಲಕ್ಷ್ಮೀ ಕದ್ದು ಬೇರೆ ವ್ಯಕ್ತಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲದೇ ಆ ಕಾರನ್ನು ಎಲ್ಲೋ ಅಪಘಾತ ಮಾಡಿದ್ದಾರೆ, ಕಾರಿನ ಗಾಜುಗಳು ಒಡೆದು ಹೋಗಿವೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ದೂರು ದಾಖಲಿಸಿದ್ದಾಳೆ ಎಂದು ಆಪಾದಿಸಿದ್ದಾರೆ. 
ನನ್ನ ಪತಿ ದರ್ಶನ್ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಾರೆ, ಅವರನ್ನು ಕರೆಸಿ ಬುದ್ಧಿವಾದ ಹೇಳಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com