ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ: ನಿರ್ಲಕ್ಷ್ಯತೆಗೆ ಶಾಲೆಗಳು ಹೊಣೆಯೇ?

ಕಳೆದ ವಾರ ಬೆಂಗಳೂರಿನ ಶಾಲೆಯೊಂದರಲ್ಲಿ ಬೇಸಿಗೆ ಶಿಬಿರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ...
ಕೆಂಪಾಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಶಾಲೆಯ ಮುಂದಿನ ಆಟದ ಮೈದಾನದಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದ ಸ್ಥಳ
ಕೆಂಪಾಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಶಾಲೆಯ ಮುಂದಿನ ಆಟದ ಮೈದಾನದಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದ ಸ್ಥಳ
Updated on: 

ಬೆಂಗಳೂರು: ಕಳೆದ ವಾರ ಬೆಂಗಳೂರಿನ ಶಾಲೆಯೊಂದರಲ್ಲಿ ಬೇಸಿಗೆ ಶಿಬಿರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಪೋಷಕರು ಮತ್ತು ಮಕ್ಕಳನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈ ಪ್ರಕರಣ ಕುರಿತು ಅಮೃತಹಳ್ಳಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಶಾಲೆಯ ಮಾಲಿಕ ದೇವರಾಜು ಶಿಬಿರದ ಆಯೋಜಕರಿಂದ ಶೇಕಡಾ 25ರಷ್ಟು ಆದಾಯವನ್ನು ಪಡೆದುಕೊಂಡಿದ್ದಾರೆ. ಘಟನೆ ನಡೆದ ಜಾಗದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಅಲ್ಲದೆ ಸ್ಥಳವನ್ನು ಬೇಸಿಗೆ ಶಿಬಿರಕ್ಕೆ ನೀಡುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸಿರಲಿಲ್ಲ ಎಂದು ತಿಳಿದುಬಂದಿದೆ. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ದೇವರಾಜ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಿಗಲಿಲ್ಲ.

ಕೆಂಪಾಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಬೇಸಿಗೆ ಶಿಬಿರದಲ್ಲಿ 5 ವರ್ಷದ ಬಾಲಕಿ ಮೇಲೆ ಡ್ಯಾನ್ಸ್ ಶಿಕ್ಷಕ ಪೀಟರ್ ಎಂಬುವವನು ಲೈಂಗಿಕ ಕಿರುಕುಳ ನೀಡಿದ್ದಾನೆ. ಮೇ 3ರಂದು ಶಿಬಿರ ಮುಗಿದ ನಂತರ ಬಾಲಕಿ ವಿಪರೀತ ಹೊಟ್ಟೆನೋವು ಎಂದು ಅಳುತ್ತಿದ್ದಳು. ಆಕೆಯ ಪೋಷಕರು ಅವಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಹೋಗಿ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಲೈಂಗಿಕ ಆಕ್ರಮಣ ನಡೆದಿರುವುದು ಸಾಬೀತಾಗಿದೆ. ಪೊಲೀಸರ ಬಳಿ ದೂರು ದಾಖಲಿಸಿ ನೃತ್ಯ ಶಿಕ್ಷಕ ಪೀಟರ್ ನನ್ನು ಬಂಧಿಸಲಾಯಿತು. ಈಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪೋಕ್ಸೋ ಕೇಸಿನಲ್ಲಿ ಕೆಳ ಹಂತದ ನ್ಯಾಯಾಲಯಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಹೈಕೋರ್ಟ್ ಇತ್ತೀಚೆಗೆ ಕ್ರಮಗಳನ್ನು ಹೊರಡಿಸಿತ್ತು.ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಇದೇ ಮೊದಲಲ್ಲ.

ಕಳೆದ ವರ್ಷ ಆಗಸ್ಟ್ ನಲ್ಲಿ ಇಂದಿರಾನಗರದಲ್ಲಿ ಮೂರು ವರ್ಷದ ಮಗುವಿನ ಮೇಲೆ ಶಾಲೆಯ ಕಾವಲುಗಾರ ಲೈಂಗಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಆರೋಪಿ ಗೌತಮ್ ಜೈಲಿನಲ್ಲಿದ್ದಾನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಯೊಂದರಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಿ ನಂತರ ಪೋಕ್ಸೋ ಕಾಯ್ದೆಯಡಿ ಅವರನ್ನು ಬಿಡುಗಡೆ ಮಾಡಲಾಯಿತು. ಆಗ ಪೋಷಕರು ಹೈಕೋರ್ಟ್ ಮೊರೆ ಹೋದರು.

ಮಾರ್ಚ್ 19, 2014ರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಆರೋಪಿ ಅಬ್ದುಲ್ಬರಿಗೆ ಮೂರು ವರ್ಷ ಕಠಿಣ ಶಿಕ್ಷೆ ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com