ಸ್ಮಾರ್ಟ್ ಸಿಟಿ ರೇಸ್'ಗೆ ಸೇರಲಿದೆ ಬೆಂಗಳೂರು: ವೆಂಕಯ್ಯ ನಾಯ್ಡು

ಮುಂದಿನ ವರ್ಷದ ಸ್ಮಾರ್ಟ್ ಸಿಟಿ ರೇಸ್ ಸಾಲಿನಲ್ಲಿ ಬೆಂಗಳೂರು ಸೇರಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 

ಬೆಂಗಳೂರು: ಮುಂದಿನ ವರ್ಷದ ಸ್ಮಾರ್ಟ್ ಸಿಟಿ ರೇಸ್ ಸಾಲಿನಲ್ಲಿ ಬೆಂಗಳೂರು ಸೇರಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿ ನಂತರ ಮಾತನಾಡಿರುವ ಅವರು, ಸ್ಮಾರ್ಟ್ ಸಿಟಿ ನಗರದವನ್ನು ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರದ ಬಳಿ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿರಲಿಲ್ಲ. ಆದರೆ, ನಾವೇ ಸ್ವತಃ ನಗರವನ್ನು ಸ್ಮಾರ್ಟ್ ಸಿಟಿ ಸಾಲಿನಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ.

ಒಂದು ವೇಳೆ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಪಟ್ಟ ಬಂದಿದ್ದೇ ಆದರೆ, ನಗರದಲ್ಲಿನ ಮಾಲಿನ್ಯ, ಟ್ರಾಫಿಕ್ ಹಾಗೂ ಇನ್ನಿತರೆ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರ ಮುಂದಿನ ಹೆಜ್ಜೆ ಕುರಿತಂತೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ರಸ್ತೆಗಳ ಅಭಿವೃದ್ಧಿಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಇದರಂತೆ ಬಾಹ್ಯ ರಿಂಗ್ ರಸ್ತೆಗಳು ಹಾಗೂ ಇನ್ನಿತರೆ ರಸ್ತೆಗಳಿಗಾಗಿ ಹಣವನ್ನು ಬಿಡುಗಡೆ ಮಾಡಲಿದೆ. ಇನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬೆಂಗಳೂರಿಗಾಗಿ ಸುಬರ್ಬನ್ ರೈಲು ಯೋಜನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ.

ಅಮೃತ್ ಸಿಟಿ ಯೋಜನೆಗಳಲ್ಲಿ ಕರ್ನಾಟಕ 27 ನಗರಗಳ ಅಭಿವೃದ್ಧಿಗಾಗಿ ಕೇಂದ್ರ 4,327 ಕೋಟಿ ಹಣವನ್ನು ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ಕೆಲವು ಯೋಜನೆಗಳ ಅಡಿಯಲ್ಲಿ ಬೆಂಗಳೂರು ಸೇರಿದಂದೆ ಈಗಾಗಲೇ 8,000 ಕೋಟಿ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com